ಆಪ್ತಮಿತ್ರನೊಂದಿಗೆ ಮದುವೆ ತುಂಬಾ ಖುಷಿ ಕೊಟ್ಟಿದೆ

ಶುಕ್ರವಾರ, 17 ಫೆಬ್ರವರಿ 2017 (11:40 IST)
ತನ್ನ ಆಪ್ತಮಿತ್ರ ರಾಮ್ ಚರಣ್‌ರನ್ನು ವರಿಸಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಉಪಾಸನಾ ಕಾಮಿನೇನಿ ಹಳೆ ನೆನಪುಗಳಿಗೆ ಜಾರಿದ್ದಾರೆ. ಟ್ವಿಟ್ಟರ್ ಮೂಲಕ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಶುಭಾಶಯ ತಿಳಿಸುತ್ತಾ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
 
ರಾಮ್ ಚರಣ್ ಜತೆಗೆ ವಿವಿಧ ಸಂದರ್ಭಗಳಲ್ಲಿ ಸಂತೋಷವಾಗಿ ಕಳೆದ ದಿನಗಳನ್ನು ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಚೆರ್ರಿ ಭುಜಗಳ ಮೇಲೆ ವಾಲಿಕೊಂಡಿದ್ದರೆ, ಇನ್ನೊಂದರಲ್ಲಿ ಬೈಕ್‌ನಲ್ಲಿ ಎಂಜಾಯ್ ಮಾಡುವ ಫೋಟೋ ಹಂಚಿಕೊಂಡಿದ್ದಾರೆ.
 
ಇನ್ನೊಂದು ಫೋಟೋದಲ್ಲಿ ಯಾವುದೋ ಸಮಾರಂಭದಲ್ಲಿ ಇಬ್ಬರೂ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿವೆ. ಇತ್ತೀಚೆಗೆ ತೆರೆಕಂಡ ಧೃವ ಸಿನಿಮಾ ಒಳ್ಳೆಯ ಹಿಟ್ ಲಿಸ್ಟ್ ಸೇರಿದೆ. ಸದ್ಯಕ್ಕೆ ಸುಕುಮಾರ್ ಆಕ್ಷನ್ ಕಟ್ ನಲ್ಲಿ ರಾಮ್ ಚರಣ್ ಅಭಿನಯಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ