ರಿಯಲ್ ಸ್ಟಾರ್ ಉಪೇಂದ್ರ ‘ಕಬ್ಜ’ಕ್ಕೆ ಇಂದು ಅದ್ಧೂರಿ ಮುಹೂರ್ತ
ಐ ಲವ್ ಯೂ ಸಿನಿಮಾ ನಿರ್ದೇಶಿಸಿದ ಆರ್ ಚಂದ್ರು ಕಬ್ಜ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಇದು ಒಟ್ಟು 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಎಲ್ಲಾ ಭಾಷೆಗಳ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು, ಸಿನಿಮಾ ದಿಗ್ಗಜರು ಈ ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವಿದು.