ಒಂದೇ ದಿನದಲ್ಲಿ ಡಬ್ಬಿಂಗ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

ಶುಕ್ರವಾರ, 31 ಅಕ್ಟೋಬರ್ 2014 (13:04 IST)
ಸಾಕಷ್ಟು ಗದ್ದಲ ಮಾಡಿದ್ದ ಟೈಟಲ್ ರಹಿತ ಚಿತ್ರ ಉಪೇಂದ್ರ ನಟನೆಯ ಸಿಂಬಲ್ ಸಿನಿಮ ಈಗ ಡಬ್ಬಿಂಗ್  ಕಾರ್ಯವನ್ನು ಪೂರ್ಣ ಮಾಡಿದೆ. ತನ್ವಿ ಫಿಲಿಮ್ಸ್ ಲಾಂಛನದಲ್ಲಿ ಸಿ . ಆರ್ ಮನೋಹರ್ ಅವರ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರ ತನ್ನ ಡಬ್ಬಿಂಗ್ ಕೆಲಸವನ್ನು ಪೂರ್ಣ ಮಾಡಿದೆ. 
 
ಈ ಚಿತ್ರ ಆರಂಭದಲ್ಲಿ ಬಸವಣ್ಣ ಎನ್ನುವ ಶೀರ್ಷಿಕೆ ಹೊಂದಿದ್ದು, ಆ ಬಳಿಕ ಟೈಟಲ್ ಗೆ ಸಂಬಂಧಪಟ್ಟಂತೆ ಆದ ವಿವಾದದಿಂದ ಅಲ್ಲಿ ಕೇವಲ ಒಂದು ಚಿನ್ಹೆ ಇಟ್ಟು ಸುಮ್ಮನಾಗಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ಪೂರ್ಣವಾಗಿದೆ. 
 
ಉಪೇಂದ್ರ ಈ ಚಿತ್ರದ ಡಬ್ಬಿಂಗ್ ಕೇವಲ ಒಂದೇ ದಿನದಲ್ಲಿ ಪೂರ್ಣ ಮಾಡಿದ್ದಾರೆ. ಶ್ರೀನಿವಾಸ ರಾಜು ಕಥೆ ಬರೆದು ನಿರ್ದೇಶಿಸುತ್ತಿರುವ ಅದ್ಧೂರಿ ವೆಚ್ಚದ ಚಿತ್ರವನ್ನು  ನೂರು ದಿನಗಳ ಕಾಲ್ ಟರ್ಕಿ, ಬ್ಯಾಂಕಾಕ್, ಚೆನ್ನೈ, ತಂಜಾವೂರ್, ಮೈಸೂರು, ಮೇಲುಕೋಟೆ ಮತ್ತು  ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗಿದೆ. 
 
ಮಣಿ ಶರ್ಮ ಸಂಗೀತ ಇರುವ ವೆಂಕಟೇಶ್ ಪ್ರಸಾದ್ ಛಾಯಾಗ್ರಹಣ, ಕಣ್ಣನ್ ಸಾಹಸ, ವಿಜಯ್, ಶಿವಶಂಕರ್, ಪ್ರದೀಪ್ ಅಂತೋನಿ ಮತ್ತು ರಘು ನೃತ್ಯ ನಿರ್ದೇಶನ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಹೊಂದಿದೆ ಸಿಂಬಲ್ ಚಿತ್ರ. ಗುರುರಾಜ್ ಎಂ ದೇಸಾಯಿ ಅವರು ಸಂಭಾಷಣೆ ಬರೆದಿರುವ ಚಿತ್ರದಲ್ಲಿ ಉಪೇಂದ್ರ, ರಾಗಿಣಿ, ಸಲೋನಿ, ಶ್ರೀನಿವಾಸ ಮೂರ್ತಿ  ಮುಂತಾದವರು ನಟಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ