ನಟ ಜೆಕೆ ಸಿನಿಮಾ ಟೈಟಲ್ ಬಗ್ಗೆ ಉಪೇಂದ್ರ ಅಭಿಮಾನಿಗಳು ಗರಂ ಆಗಿದ್ಯಾಕೆ?

ಬುಧವಾರ, 29 ಆಗಸ್ಟ್ 2018 (06:50 IST)
ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಟೈಟಲ್ ಬಗ್ಗೆ ಆಗಾಗ ವಿವಾದಗಳು ತಲೆಎತ್ತುತ್ತಿದ್ದು, ಇದೀಗ ಮತ್ತೆ ಸಿನಿಮಾವೊಂದರ ಟೈಟಲ್ ಕುರಿತು ಅಭಿಮಾನಿಗಳು ಪುಲ್ ಗರಂ ಆಗಿದ್ದಾರೆ.


ಜಯರಾಮ್ ಕಾರ್ತಿಕ್ ಅಭಿನಯದ 'ಮೇ ಫಸ್ಟ್' ಚಿತ್ರವು ಕಳೆದ ಶುಕ್ರವಾರ ತೆರೆ ಕಂಡಿತ್ತು. ಈ ಚಿತ್ರದಲ್ಲಿ ನಾಯಕ ಜೆ.ಕೆ ಅವರಿಗೆ 'ಸೂಪರ್ ಸ್ಟಾರ್' ಎಂಬ ಹೆಸರನ್ನು ನೀಡಲಾಗಿದೆ. ಈ ಬಗ್ಗೆಇದೀಗ  ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳು ಗರಂ ಆಗಿದ್ದಾರೆ.


'ಸೂಪರ್ ಸ್ಟಾರ್’ ಟೈಟಲ್ ಉಪ್ಪಿ ಅವರಿಗೆ ಸೇರಿದೆ. ಬುದ್ಧಿವಂತನ ಸಹನೆ ಪರೀಕ್ಷೆ ಮಾಡಬೇಡಿ. ಆ ಟೈಟಲ್ ಬಳಸಿಕೊಂಡಿದ್ದಕ್ಕೆ ಉಪೇಂದ್ರ ಅವರ ಬಳಿ ಕ್ಷಮೆ ಕೇಳಬೇಕು' ಎಂದು ಉಪೇಂದ್ರ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಕೆ 'ಈ ಸಿನಿಮಾ ನೋಡಿದರೆ ಸೂಪರ್ ಸ್ಟಾರ್ ಟೈಟಲ್ ಇಟ್ಟಿದ್ದು ಏಕೆ ಎಂದು ಗೊತ್ತಾಗುತ್ತದೆ. ಇದು ಒಂದು ದೃಶ್ಯದಲ್ಲಿ ಮಾತ್ರ ಬರುತ್ತದೆ. ನಾನೇನೂ ತಪ್ಪು ಮಾಡಿಲ್ಲ. ದಯವಿಟ್ಟು ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು. ನಾನು ಸಹ ಉಪೇಂದ್ರರ ಅಭಿಮಾನಿ. ಅವರ ಜೊತೆಗೆ ನಾನು ಸ್ಪರ್ಧೆಗೆ ನಿಲ್ಲುವುದಕ್ಕೆಆಗುವುದಿಲ್ಲ' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ