ಅಪಾಯಕಾರಿ ಡೆಡ್ಲಿ ಮೊಮೊ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ಹೊರಟ ಸೈಬರ್ ಕ್ರೈಂ ಪೊಲೀಸರು

ಮಂಗಳವಾರ, 28 ಆಗಸ್ಟ್ 2018 (10:43 IST)
ಬೆಂಗಳೂರು : ಡೆಡ್ಲಿ ಮೊಮೊ ಗೇಮ್ ನಿಂದಾಗಿ ಈಗಾಗಲೇ ಭಾರತದಲ್ಲಿ ಸಾವು ಸಂಭವಿಸಿರುವ ಹಿನ್ನಲೆಯಲ್ಲಿ ಇದೀಗ ಈ ಗೇಮ್ ಬಗ್ಗೆ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.


ಈ ಮೊಮೊ ಗೇಮ್ ಒಂದು ಸುಸೈಡ್ ಗೇಮ್ ಆಗಿದ್ದು, ಇದು ಜನರನ್ನು ದೈಹಿಕ ಹಾನಿ ಮತ್ತು ತಮ್ಮನ್ನು ತಾವೇ ಸುಸೈಡ್ ಮಾಡಿಕೊಳ್ಳಲು ಪ್ರಚೋದಿಸುತ್ತದೆ. ಒಂದು ವೇಳೆ ಗೇಮ್ ಪೂರ್ಣಗೊಳಿಸದಿದ್ದರೆ ಕಠಿಣ ಶಿಕ್ಷೆ ನೀಡುವುದಾಗಿ ಬ್ಲಾಕ್ ಮೇಲ್ ಮಾಡಲಾಗುತ್ತದೆ. ಇದು ವಿದೇಶದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿದ್ದು, ಇದೀಗ ಭಾರತೀಯ ವಿದ್ಯಾರ್ಥಿಗಳು ಇದರ ಬಲೆಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ.


ಈ ಹಿನ್ನಲೆಯಲ್ಲಿ ಇದೀಗ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಈ ಡೆಡ್ಲಿ ಗೇಮ್ ನ ಕುರಿತು ಮಾಹಿತಿ ನೀಡಿದ್ದಾರೆ. ಮೊಮೊ ಗೇಮ್ ಆಟದಿಂದ ದೂರ ಇರಬೇಕು. ಆಟಕ್ಕೆ ಸಂಬಂಧಿಸಿದ ಲಿಂಕ್ ಶೇರ್ ಮಾಡಬೇಡಿ. ಗೇಮ್ ನ್ನು ಡೌನ್ ಲೋಡ್ ಮಾಡಬಾರದು ಎಂದು ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ