ಯುಐ ಸಕ್ಸಸ್‌ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ನೀಡಿದ ಉಪೇಂದ್ರ

Sampriya

ಶನಿವಾರ, 28 ಡಿಸೆಂಬರ್ 2024 (16:15 IST)
Photo Courtesy X
ಬೆಂಗಳೂರು:  ಕಳೆದ ಶುಕ್ರವಾರ ನಟ ಉಪೇಂದ್ರ ಡೈರೆಕ್ಷನ್‌ನಲ್ಲಿ ಮೂಡಿಬಂದ ಬಹುನಿರೀಕ್ಷಿತ ಚಿತ್ರ ಯುಐಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಇದೀಗ ಸಿನಿಮಾದ ಸಕ್ಸಸ್‌ ಅನ್ನು ಚಿತ್ರತಂಡ ಇಂದು ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸೆಲೆಬ್ರೇಟ್ ಮಾಡಿದೆ.  

ಸಕ್ಸಸ್ ಮೀಟ್‌ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ , ನಟಿ ರೀಷ್ಮಾ ನಾಣಯ್ಯ, ಲಹರಿ ವೇಲು, ಕೆಪಿ ಶ್ರೀಕಾಂತ್, ಜಿ ಮನೋಹರನ್ ಮುಂತಾದವ್ರು ಭಾಗಿಯಾಗಿದ್ದರು. ಈ ವೇಳೆ ಸಿನಿಮಾ ತಂಡದಿಂದ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲಾಯಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ನಾನು ಅನ್ಕೊಂಡಕ್ಕಿನ್ನ ಜಾಸ್ತಿ ಡಿಕೋಡಿಂಗ್ ಮಾಡಿದ್ದಾರೆ. ಸಿನಿಮಾ ನೋಡಿದವರು ಉತ್ತಮ ರಿವೀವ್ಸ್ ನೀಡಿದ್ದಾರೆ.  ಕ್ರೆಡಿಟ್ ಎಲ್ಲ ಮಾಧ್ಯಮದವರಿಗೆ ಕೊಡ್ಬೇಕು. ಡೈರೆಕ್ಷನ್‌ಗೆ ಜಾಸ್ತಿ ಗ್ಯಾಪ್ ಕೊಡೊಲ್ಲ ಇನ್ನುವ ಮೂಲಕ ಮತ್ತೇ ಸಿನಿಮಾ ನಿರ್ದೇಶನ ಮಾಡುವ ಮುನ್ಸೂಚನೆಯನ್ನು ನೀಡಿದರು.

ಲಹರಿ ವೇಲು ಮಾತನಾಡಿ, ಉಪ್ಪಿ ಅವರಿಗೆ ಐದು ಮಿದುಳಿವೆ. ಒಂದು ಆ್ಯಂಗಲ್‌ನಲ್ಲಿ ನಾವು ಯೋಚಿಸ್ತಿದ್ರೆ, ಉಪೇಂದ್ರ ಐದು ಪಟ್ಟು ಮುಂದಿರ್ತಾರೆ. ಉಪ್ಪಿ ಕಂಟೆಂಟ್ ಕಿಂಗ್ ಎಂದು ಹೊಗಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ