ಉಪೇಂದ್ರ ಅಭಿನಯದ ಉಪ್ಪಿ 2 ಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್

ಬುಧವಾರ, 29 ಜುಲೈ 2015 (10:18 IST)
ರಿಯಲ್ ಸ್ಟಾರ್  ಉಪೇಂದ್ರ ಅವರು ಬಹು ನಿರೀಕ್ಷಿತ ಚಿತ್ರ ಉಪ್ಪಿ 2 . ಆರಂಭದಿಂದಲೂ ಅನೇಕಾನೇಕ ಕುತೂಹಲಗಳನ್ನು ಉಳಿಸಿಕೊಂಡು ಬಂದಿದ್ದ ಚಿತ್ರ ಇದ್ದಾಗಿದೆ. ಪ್ರಿಯಾಂಕ ಉಪೇಂದ್ರ ಅವರು ನಿರ್ಮಾಣ ಮಾಡಿರುವ ಈ ಚಿತ್ರ  ಉಪೇಂದ್ರ ಅವರ ಹೋಂ ಬ್ಯಾನರ್ ನಲ್ಲಿ ತಯಾರಾಗಿದೆ. ಈ ಚಿತ್ರಕ್ಕೆ ಇತ್ತೀಚೆಗೆ  ಸೆನ್ಸಾರ್ ಬೋರ್ಡ್ ಯು/ ಎ ಸರ್ಟಿಫಿಕೇಟ್ ನೀಡಿದೆ. ಈಗ ಚಿತ್ರ ಜನರ ಮುಂದೆ ಬರಲು ಸಿದ್ಧವಾಗಿದೆ. ಆಗಸ್ಟ್ 14 ರಂದು ಉಪ್ಪಿ2 ಪ್ರದರ್ಶಿತವಾಗಲಿದೆ. 
ಇದು 1999ರಲ್ಲಿ ಬಿಡುಗಡೆ ಆದ ಉಪೇಂದ್ರ ಚಿತ್ರದ ಮುಂದುವರೆದ ಭಾಗವಾಗಿದೆ. ಅನೇಕ ಬಗೆಯ ವಿಸ್ಮಯಗಳು, ಕುತೂಹಭರಿತ ಸಂಗತಿಗಳನ್ನು ಈ ಚಿತ್ರ ಹೊಂದಿದ್ದು , ದೇಶ ವಿದೇಶದಲ್ಲಿ ಚಿತ್ರೀಕರಣ ಮಾಡಿಸಿಕೊಂಡು ಇನ್ನೇನು ಬಿಡುಗಡೆಯ ಹಾದಿಯಲ್ಲಿದೆ.  ಹಾಡಿನ ಮೂಲಕ, ಚಿತ್ರಕಥೆಯ ಮುಖಾಂತರ ಈ ಚಿತ್ರ ವಿವಾದ ಅನುಭವಿಸುತ್ತಾ ಇದ್ದು  ಸಾಕಷ್ಟು ಹೆಸರನ್ನು ಆ ಮೂಲಕವೂ ಗಳಿಸಿದ ಚಿತ್ರ ಇದಾಗಿದೆ. ಈಗ ಸೆನ್ಸಾರ್ ಮಂಡಳಿಯವರು ಬಿಡುಗಡೆಗೆ ಸಮ್ಮತಿ ನೀಡಿದ್ದಾರೆ. ಉಪ್ಪಿ ಅಭಿಮಾನಿಗಳಿಗೆ ಸ್ವಲ್ಪ ದಿನದಲ್ಲೇ ಬಂಪರ್ ಖುಷಿ. 

ವೆಬ್ದುನಿಯಾವನ್ನು ಓದಿ