ಊರ್ವಶಿ ಈಗ ಶಿವಣ್ಣನ ತಾಯಿ

ಶುಕ್ರವಾರ, 19 ಡಿಸೆಂಬರ್ 2014 (10:03 IST)
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಚಿತ್ರಗಳಲ್ಲಿ ಅನೇಕ ಭಿನ್ನತೆ, ವಿಶೇಷತೆ ಇದ್ದೆ ಇರುತ್ತದೆ. ಆಕ್ಷನ್‌, ಲವ್‌ ಜೊತೆಗೆ ತಾಯಿ ಸೆಂಟಿಮೆಂಟ್‌ನಲ್ಲೂ ಶಿವರಾಜ್‌ ಕುಮಾರ್ ಸೈ ಎನಿಸಿಕೊಂಡಿದ್ದಾರೆ. ಆದ್ದರಿಂದ ಶಿವಣ್ಣ ಸೆಂಟಿಮೆಂಟ್ ಹೆಚ್ಚಿಸಲು ಸದಾ ಒಬ್ಬ ತಾಯಿ ಇರಲೇ ಬೇಕು.  
ಆ ನಿಟ್ಟಿನಲ್ಲಿ ಈಗ ಪಿ ವಾಸು ನಿರ್ದೇಶನದ  ಶಿವಣ್ಣನ ಶಿವಲಿಂಗ ಚಿತ್ರದಲ್ಲೂ ಶಿವರಾಜ್‌ಕುಮಾರ್ಗೊಬ್ಬರು ತಾಯಿ ಇದ್ದಾರೆ. ಆಕೆ ಊರ್ವಶಿ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಊರ್ವಶಿ ಈಗ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.  ಡಾ. ರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಹಲವಾರು ಕನ್ನಡ ತಾರೆಯರ ಜೊತೆ ನಟಿಸಿರುವ ಈಕೆ ಈಗ ಶಿವಣ್ಣ ತಾಯಿ ಆಗಲೆಂದು ಬಂದಿದ್ದಾರೆ. 
 
ಊರ್ವಶಿ ತಾಯಿ ಪಾತ್ರ ಮಾಡಲು ಒಪ್ಪಿದ್ದಾರೆ. ಶಿವರಾಜ್‌ಕುಮಾರ್ ಸೆಂಟಿಮೆಂಟ್‌ಗೂ ಹೆಸರುವಾಸಿ ಎಂದು ನನಗೆ ಗೊತ್ತು. ಅದಕ್ಕೆ ಅವರ ಈ ಹಿಂದಿನ ಕೆಲಸ ಚಿತ್ರಗಳೇ ಸಾಕ್ಷಿ ಎಂದಿದ್ದಾರೆ  ವಾಸು. ಚಿತ್ರದ ದ್ವಿತೀಯಾರ್ಧದಲ್ಲಿ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಸೆಂಟಿಮೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ.  ಶಿವರಾಜ್‌ಕುಮಾರ್ ಅವರ ವಜ್ರಕಾಯ ಚಿತ್ರದಲ್ಲಿ ಜಯಸುಧಾ ತಾಯಿಯಾಗಿ ನಟಿಸಿದ್ದಾರೆ. ಈಗ ಊರ್ವಶಿ ಸರದಿ.  ಶಿವಣ್ಣ ಈ ಮೊದಲು ಅರುಂಧತಿ ನಾಗ್‌, ಪದ್ಮಾವಾಸಂತಿ, ಗಿರಿಜಾ ಲೋಕೇಶ್‌ ಸೇರಿದಂತೆ ಅನೇಕರ ಮುದ್ದಿನ ಮಗನ ಪಾತ್ರದಲ್ಲಿ ನಟಿಸಿಯಾಗಿದೆ. 

ವೆಬ್ದುನಿಯಾವನ್ನು ಓದಿ