ಖ್ಯಾತ ತಮಿಳು ನಟ ವಡಿವೇಲು ಆಸ್ಪತ್ರೆಗೆ ದಾಖಲು
ಖಾಸಗಿ ಕಾರ್ಯಕ್ರಮ ನಿಮಿತ್ತ ವಡಿವೇಲು ಲಂಡನ್ ಗೆ ತೆರಳಿದ್ದರು. ಗುರುವಾರವಷ್ಟೇ ಅವರು ಚೆನ್ನೈಗೆ ಬಂದಿಳಿದಿದ್ದರು. ಇದಾದ ಬಳಿಕ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು.
ತಪಾಸಣೆ ನಡೆಸಿದಾಗ ಕೊರೋನಾ ದೃಢಪಟ್ಟಿದೆ. ಆದರೆ ಇದು ಒಮಿಕ್ರಾನ್ ಅಲ್ಲ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.