ವಂಶೋದ್ಧಾರಕ ಆಡಿಯೋ ರಿಲೀಸ್

ಶನಿವಾರ, 1 ಆಗಸ್ಟ್ 2015 (10:20 IST)
ವಂಶೋದ್ಧಾರಕ. ವಿಜಯ್ ರಾಘವೇಂದ್ರ ಹಾಗೂ ಮೇಘನಾ ರಾಜ್ ಅಭಿನಯಿಸುತ್ತಿರುವ ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. ಈಗಾಗಲೇ ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾದ ಆಡಿಯೋ ರಿಲೀಸ್ ಇತ್ತೀಚೆಗಷ್ಟೇ ನೆರವೇರಿತು.
ಇನ್ನು ಈ ಸಿನಿಮಾದಲ್ಲಿ ಹೆಸರಿಗೆ ತಕ್ಕಂತೆ ಸ್ಪೆಷಲ್ ಹಾಡುಗಳಿದ್ದು, ವಿ. ಮನೇಹರ್ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದ್ರಲ್ಲೂ ಒಂದು ಸಾಂಗ್ ಈಗಾಗಲೇ ಸಿನಿರಸಿಕರ ದಿಲ್ ಕದ್ದಿದೆಯಂತೆ. ಇನ್ನು ರೈತನೊಬ್ಬನ ಕಥೆಯಾಧಾರಿತ ಈ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ರೈತನಾಗಿ ಕಾಣಿಸಿಕೊಂಡಿದ್ದು, ಅವರೇ ಇಷ್ಟ ಪಟ್ಟು ಈ ಪಾತ್ರ ಮಾಡಿದ್ದಾರಂತೆ.
 
ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ ಸಿನಿಮಾದಲ್ಲಿ ವಂಶೋದ್ಧಾರಕನಿಗೆ ನಾಯಕಿಯಾಗಿ ಮೇಘನಾ ರಾಜ್ ಕಾಣಿಸಿಕೊಂಡಿರೋದು. ರಾಜಾ ಹುಲಿ ಸಿನಿಮಾದಲ್ಲಿನ ಪಕ್ಕಾಹಳ್ಳಿ ಹುಡ್ಗಿ ಗೆಟಪ್ ನಲ್ಲಿ ಮಿಂಚಿದ್ದ ಮೇಘನಾ ನಟನೆ ನೋಡಿ ಆಕೆಗೆ ಈ ಸಿನಿಮಾದಲ್ಲೂ ಮತ್ತದೇ ರೀತಿಯ ಪಾತ್ರ ಒಲಿದು ಬಂದಿದೆಯಂತೆ. ಅಲ್ಲದೇ ಹಾಡುಗಳಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸಖತ್ ಆಗಿದೆಯಂತೆ. ಅಲ್ಲದೇ ಚಿತ್ರದಲ್ಲಿ ರಂಗಾಯಣ ರಘು ಅವರು ತುಂಬಾನೇ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ವೆಬ್ದುನಿಯಾವನ್ನು ಓದಿ