ದಿಲ್ ವಾಲೇ ಹಾಗೂ ಭಾಜೀರಾವ್ ಮಸ್ತಾನಿ ಒಂದೇ ದಿನ ರಿಲೀಸ್ ಆಗುತ್ತಿರೋದಕ್ಕೆ ಖುಷಿಯಾಗುತ್ತಿದೆ-ವರುಣ್ ಧವನ್

ಶನಿವಾರ, 28 ನವೆಂಬರ್ 2015 (10:37 IST)
ಬಾಲಿವುಡ್ ಅಂಗಳದಲ್ಲಿ ಸದ್ಯ ಭಾರೀ ಸುದ್ದಿಯಾಗುತ್ತಿರುವ ಸಿನಿಮಾಗಳಲ್ಲಿ ಒಂದು ಭಾಜೀರಾವ್ ಮಸ್ತಾನಿ ಹಾಗೂ ದಿಲ್ ವಾಲೇ. ಈಗಾಗಲೇ ಈ ಎರಡು ಸಿನಿಮಾಗಳು ಎಲ್ಲೆಡೆ ಹವಾ ಕ್ರಿಯೇಟ್ ಮಾಡುತ್ತಿವೆ. ಎರಡೂ ಸಿನಿಮಾಗಳು ಡಿಸೆಂಬರ್ 18ರಂದು ರಿಲೀಸ್ ಆಗುತ್ತಿವೆ. ಆದ್ರೆ ಎರಡೂ ಸಿನಿಮಾಗಳು ಒಂದೇ ರಿಲೀಸ್ ಆಗುತ್ತಿರೋದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ದಿಲ್ ವಾಲೇ ಸಿನಿಮಾದ ನಟ ವರುಣ್ ಧವನ್ ಹೇಳಿದ್ದಾರೆ.

ಈಗಾಗಲೇ ಭಾಜೀರಾವ್ ಮಸ್ತಾನಿ ಹಾಗೂ ದಿಲ್ ವಾಲೇ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರೋದರಿಂದ ಎರಡೂ ಸಿನಿಮಾ ತಂಡಗಳು ಕೂಡ ತಲೆ  ಕೆಡಿಸಿಕೊಂಡಿವೆ.ಆದ್ರೆ ದಿಲ್ ವಾಲೇ ಸಿನಿಮಾದ ನಟ ವರುಣ್ ಧವನ್ ಗೆ ಮಾತ್ರ ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರೋದು ಖುಷಿ ನೀಡಿದೆಯಂತೆ. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗೋದರಿಂದ ಏನೋ ಒಂಥರಾ ಮಜ ಸಿಗುತ್ತೆ ಅಂತಾ ವರುಣ್ ಹೇಳಿದ್ದಾರೆ. ಆವತ್ತು ಒತ್ತಡದ ನಡುವೆಯೇ ಏನೋ ಒಂದು ಖುಷಿ ಇರುತ್ತೆ ಅಂತಾ ಅವರು ಹೇಳಿದ್ದಾರೆ.
 
ದಿಲ್ ವಾಲೇ  ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು, ಕಾಜೋಲ್ ಹಾಗೂ ಶಾರುಖ್ ಜೋಡಿ ಬಹು ವರ್ಷದ ನಂತರ ಈ ಸಿನಿಮಾದ ಮೂಲಕ ತೆರೆ ಮೇಲೆ ಒಂದಾಗಿದ್ದಾರೆ. ಇನ್ನುಳಿದಂತೆ ವರುಣ್ ಧವನ್ ಹಾಗೂ ಕೃತಿ ಸನೋನ್ ಪ್ರೇಮಿಗಳಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 18 ರಂದು ಸಿನಿಮಾ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ