ಮಲಯಾಳಂ ಪೋಷಕ ನಟ ಮಮ್ಮುಕೋಯಾ ಇನ್ನಿಲ್ಲ

ಬುಧವಾರ, 26 ಏಪ್ರಿಲ್ 2023 (17:11 IST)
ಕೋಝಿಕ್ಕೋಡ್: ಇತ್ತೀಚೆಗಷ್ಟೇ ಹಿರಿಯ ನಟ ಇನ್ನಸೆಂಟ್ ಸಾವಿನ ಆಘಾತಕ್ಕೀಡಾಗಿದ್ದ ಮಲಯಾಳಂ ಚಿತ್ರರಂಗಕ್ಕೆ ಇಂದು ಮತ್ತೊಬ್ಬ ಹಿರಿಯ ನಟನ ಅಗಲುವಿಕೆಯ ಶಾಕ್ ಸಿಕ್ಕಿದೆ.

ಹಿರಿಯ ಪೋಷಕ ನಟ ಮಮ್ಮುಕೋಯಾ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಅವರಿಗೆ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದುವರೆಗೆ ಅವರು 450 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 800-90 ರ ದಶಕದ ಮಲಯಾಳಂ ಸಿನಿಮಾಗಳಲ್ಲಿ ಅವರದ್ದು ಒಂದು ಪಾತ್ರ ಇದ್ದೇ ಇರುತ್ತಿತ್ತು. ತೀರಾ ಇತ್ತೀಚೆಗಿನವರೆಗೂ ಅವರು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ