ಮಂಗಳೂರಿನಲ್ಲಿ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ

ಮಂಗಳವಾರ, 25 ಏಪ್ರಿಲ್ 2023 (10:31 IST)
ಮಂಗಳೂರು: ಕರಾವಳಿ ಮೂಲದ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಈಗ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ತವರಿಗೆ ಆಗಮಿಸಿದ್ದಾರೆ.

ತೆಲುಗು ಸಿನಿಮಾಗಳಲ್ಲಿ ಮಿಂಚುವ ಪೂಜಾ ಹೆಗ್ಡೆ ಮೂಲ ಮಂಗಳೂರು. ಕುಡ್ಲದ ತುಳುವರ ಮನೆ ಹುಡುಗಿಯಾಗಿರುವ ಪೂಜಾ ಈಗ ತಮ್ಮ ಮೂಲ ಊರಿಗೆ ಆಗಮಿಸಿ ಕಾಡು ಮೇಡು ಸುತ್ತಾಡುತ್ತಿದ್ದಾರೆ.

ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾ ಬಿಡುಗಡೆಯಾದ ಬಳಿಕ ಸಿಕ್ಕ ಬಿಡುವಿನ ವೇಳೆಯಲ್ಲಿ ತಮ್ಮ ಊರಿಗೆ ಬಂದಿದ್ದಾರೆ ಪೂಜಾ. ಪಕ್ಕಾ ಸಾಂಪ್ರದಾಯಿಕ ತೊಡುಗೆಯಲ್ಲಿ ಮನೆ ಮಗಳಂತೆ ಮಿಂಚುತ್ತಿದ್ದಾರೆ ಪೂಜಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ