ಚಾರ್ಲಿ ಚಾಪ್ಲಿನ್ ಪಾತ್ರದಲ್ಲಿ ವಿದ್ಯಾಬಾಲನ್ ಅಭಿನಯ

ಶನಿವಾರ, 25 ಜುಲೈ 2015 (10:11 IST)
ಕಲಾವಿದರು ತಮಗೆ ದೊರೆತ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ವಿದ್ಯಾಬಾಲನ್ ರಂತಹ ಅಭಿಜಾತ ಕಲಾವಿದರ ಬಗ್ಗೆ ಹೇಳುವಷ್ಟೇ ಇಲ್ಲ.  ಗ್ಲಾಮರ್ ಬೊಂಬೆಯಾಗಿ ಎಲ್ಲರ ಮುಂದೆ ಬಂದಿದ್ದ ಈಕೆ ಏಕ್ತಾ ಕಪೂರ್ ಅವರ ಡರ್ಟಿ ಪಿಕ್ಚರ್ ಮೂಲಕ ತಮ್ಮಲ್ಲಿ ಇರುವ ಅಭಿನೇತ್ರಿಯನ್ನು ಹೊರಗೆ ಹಾಕಿದ್ದರು. ಈಗ ಅವರು ಚಾರ್ಲಿ ಚಾಪ್ಲಿ ಎನ್ನುವ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಮಲೆಯಾಳಂ ನಿರ್ದೇಶಕ ಆರ್ ಶರತ್ ಅವರ ನಿರ್ದೇಶನದ ಹಿಂದಿ ಚಿತ್ರಕ್ಕೆ ವಿದ್ಯಾ ಅವರನ್ನು ಆಯ್ಕೆ ಮಾಡಿದ್ದಾರೆ ಶರತ್. ಇದರ ಬಗ್ಗೆ ಒಂದು ಸ್ಪಷ್ಟವಾದ  ನಿಲುವು ಪಡೆಯಲು ಶರತ್ ಅವರು ಮುಂದಿನವಾರ ಮುಂಬೈಗೆ ತೆರಳಲಿದ್ದಾರಂತೆ.ಅಲ್ಲಿ ವಿದ್ಯಾ ಅವರ ಜೊತೆ ಮಾತನಾಡಿ ಒಂದು ನಿರ್ಧಾರಕ್ಕೆ ಬರಲಿದ್ದಾರಂತೆ. 
ವಿಶ್ವನಟ ಚಾರ್ಲಿ ಚಾಪ್ಲಿನ್ ಅವರಂತೆ  ನಟಿಸುವ ಪ್ರಯತ್ನ ಅನೇಕರು ಮಾಡಿದ್ದಾರೆ. ಆ ನಿಟ್ಟಿನಲ್ಲಿ ಬಾಲಿವುಡ್ ನಟಿ ಶ್ರೀದೇವಿ ಸಹ ಸನ್ನಿವೇಶ ಒಂದರಲ್ಲಿ ಅನಿಲ್ ಕಪೂರ್ ಅಭಿನಯದ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಆಗಿ ನಟಿಸಿದ್ದರು . ಆ ಪಾತ್ರದ ಬಗ್ಗೆ ನೆನಪು ಮಾಡಿಕೊಳ್ಳುತ್ತಾ ತಮಗೂ ಸಹಿತ ಚಾರ್ಲಿ ಪಾತ್ರದಲ್ಲಿ ನಟಿಸಲು ಇಷ್ಟ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿದ್ದರು ಕಾರ್ಯಕ್ರಮ ಒಂದರಲ್ಲಿ ವಿದ್ಯಾ ಬಾಲನ್. ಅದನ್ನು ಕೇಳಿದ ಶರತ್ ಯಾಕೆ ತಾವು ತಮ್ಮ ಮುಂದಿನ ಚಿತ್ರದಲ್ಲಿ ಈ ಹೆಣ್ಣುಮಗಳಿಗೆ ಅವಕಾಶ ನೀಡ ಬಾರದು ಎಂದುಕೊಂಡು ಅದರಂತೆ ಈಗ  ಕಾರ್ಯಗತರಾಗಿದ್ದಾರೆ. ಆದರೆ ಇದು ಚಾರ್ಲಿ ಚಾಪ್ಲಿನ್ ಅವರ  ಜೀವನ ಕಥನವಲ್ಲವಂತೆ. ಈ ಸಿನಿಮಾ ಈಗಾಗಲೇ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದ್ದು, ಈಗ ಹಿಂದಿಗೆ ರೂಪಾಂತರವಾಗಲಿದೆ. 

ವೆಬ್ದುನಿಯಾವನ್ನು ಓದಿ