ಈ ಸಿನಿಮಾದಲ್ಲಿ ಜೋಡಿಯಾಗಲಿದ್ದಾರೆ ವಿಜಯ್ ದೇವರಕೊಂಡ, ಸಾಯಿ ಪಲ್ಲವಿ

Sampriya

ಬುಧವಾರ, 15 ಮೇ 2024 (19:02 IST)
photo Courtesy Instagram
ಬೆಂಗಳೂರು: ಸದ್ಯ ಬಾಲಿವುಡ್‌ನಲ್ಲಿ ರಾಮಾಯಣ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಿ ಸಾಯಿ ಪಲ್ಲವಿ ಅವರು ಇದೀಗ ತೆಲುಗಿನ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ನಟಿ ಯಾವುದೇ ಸ್ಪಷ್ಟಣೆಯನ್ನು ನೀಡಿಲ್ಲ.

ಖುಷಿ, ಫ್ಯಾಮಿಲಿ ಸ್ಟಾರ್ ನಟ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾಗೆ ಸಾಯಿ ಪಲ್ಲವಿ ಅವರು ಜೋಡಿಯಾಗಿಲಿದ್ದಾರೆಂಬ ಸುದ್ದಿಯಿದೆ. ಚಿತ್ರದ ನಿರ್ದೇಶಕ ರವಿ ಕಿರಣ್ ಕೋಲಾ ಪ್ಲ್ಯಾನ್ ಅವರು  ಸಾಯಿ ಪಲ್ಲವಿ ಅವರನ್ನು ನಾಯಕಿಯನ್ನಾಗಿ ಮಾಡಲು ಮುಂದಾಗಿದ್ದಾರೆ.

ಒಂದು ವಿಭಿನ್ನ ಕಥೆಯನ್ನು ತೋರಿಸಲು ರವಿಕಿರಣ್ ಹೊರಟಿದ್ದಾರೆ. ವಿಜಯ್‌ಗೆ ಸಾಯಿ ಪಲ್ಲವಿ ಸೂಕ್ತ ನಾಯಕಿ ಎಂದು ಚಿತ್ರತಂಡ ಯೋಚಿಸಿ ನಟಿಯನ್ನು ಸಂಪರ್ಕಿಸಿದೆ. ಸಾಯಿ ಪಲ್ಲವಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ.

ವಿಜಯ್ ದೇವರಕೊಂಡ ಅವರು ಈಚೆಗೆ  ರಾಜಾ ವರು ರಾಣಿ ಗಾರು ಖ್ಯಾತಿಯ ರವಿ ಕಿರಣ್ ಕೋಲಾ ಅವರ ನಿರ್ದೇಶನದಲ್ಲಿ ಚಿತ್ರ ಮಾಡುತ್ತಿರುವ ಬಗ್ಗೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ