ರಜನೀಕಾಂತ್ ಬಗ್ಗೆ ನಾಲಿಗೆಹರಿಯಬಿಟ್ಟು ವಿವಾದಕ್ಕೀಡಾದ ವಿಜಯ್ ದೇವರಕೊಂಡ
ವಿಜಯ್ ಸಂದರ್ಶನವೊಂದರಲ್ಲಿ ಲೈಗರ್ ಫ್ಲಾಪ್ ಆದ ಬಳಿಕ ನಿಮಗೆ ಅವಕಾಶಗಳೇ ಸಿಗಲ್ಲ ಎಂದಿದ್ದರು ಎಂಬ ಪ್ರಶ್ನೆಗೆ ಉತ್ತರಿಸುವಾಗ ರಜನೀಕಾಂತ್, ಚಿರಂಜೀವಿ ಉದಾಹರಣೆ ನೀಡಿದ್ದರು.
ಸೂಪರ್ ಸ್ಟಾರ್ ಗಳು ಫ್ಲಾಪ್-ಹಿಟ್ ಸಿನಿಮಾಗಳನ್ನು ನೀಡುತ್ತಾರೆ. ರಜನೀಕಾಂತ್ ಸಾಲು ಸಾಲು ಫ್ಲಾಪ್ ನೀಡಿದರು. ಆದರೆ ಜೈಲರ್ ನಂತಹ ಸಿನಿಮಾ ಮಾಡಿದರೆ 500 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ನಾವು ಬಾಯಿಮುಚ್ಚಿಕೊಂಡು ನೋಡಬೇಕು ಎಂದಿದ್ದರು. ಅವರ ಈ ಹೇಳಿಕೆ ರಜನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಜನಿ ಜೈಲರ್ ಸಿನಿಮಾಗೆ ಮೊದಲು ನಟಿಸಿದ್ದ ಎರಡೂ ಸಿನಿಮಾಗಳೂ ನಿರ್ಮಾಪಕರಿಗೆ ನಷ್ಟ ಮಾಡಿಲ್ಲ. ಅವರು ಸಾಲು ಸಾಲು ಫ್ಲಾಪ್ ಗಳನ್ನು ಯಾವಾಗ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.