ಪದೇ ಪದೇ ಕೈಕೊಡುತ್ತಿರುವ ಆರೋಗ್ಯ: ಸಿನಿಮಾಗಳಿಂದ ಬ್ರೇಕ್ ಪಡೆಯುತ್ತಾರಾ ಪ್ರಭಾಸ್?

ಭಾನುವಾರ, 20 ಆಗಸ್ಟ್ 2023 (08:50 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಕಳೆದ ನಾಲ್ಕೈದು ವರ್ಷಗಳಲ್ಲಿ ಸಿನಿಮಾಗಳಲ್ಲಿ ಬಿಡುವಿಲ್ಲದೇ ತೊಡಗಿಸಿಕೊಂಡಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡಿದ್ದಾರೆ.

ಬಾಹುಬಲಿ ಸಿನಿಮಾ ಶೂಟಿಂಗ್ ನಲ್ಲಿ 2-3 ವರ್ಷ ತೊಡಗಿಸಿಕೊಂಡಿದ್ದ ಪ್ರಭಾಸ್ ಬಳಿಕ ರಾಧೆ ಶ್ಯಾಮ್, ಸಾಹೋ, ಆದಿಪುರುಷ್ ಎಂಬ ಮೂರು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ, ಸಲಾರ್, ಪ್ರಾಜೆಕ್ಟ್ ಕೆ ಶೂಟಿಂಗ್ ಹಂತದಲ್ಲಿದೆ. ಇದಾದ ಬಳಿಕ ಸಲಾರ್ 2 ಮಾಡಲಿದ್ದಾರೆ. ಸತತ ಕೆಲಸಗಳ ನಡುವೆ ಅವರ ಆರೋಗ್ಯ ಪದೇ ಪದೇ ಕೈಕೊಡುತ್ತಿದೆ. ಮೊಣಕಾಲಿನ ಸಮಸ್ಯೆ ಹೊಂದಿರುವ ಪ್ರಭಾಸ್ ವಿದೇಶದಲ್ಲಿ ಇದಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾಗುತ್ತಿದ್ದಾರೆ ಎಂಬ ಸುದ್ದಿಯಿತ್ತು.

ಹೀಗಾಗಿ ಕೆಲವು ಸಮಯ ಶೂಟಿಂಗ್ ನಿಂದ ಬ್ರೇಕ್ ಪಡೆದು ತಮ್ಮ ಆರೋಗ್ಯ ಸುಧಾರಿಸುವತ್ತ ಪ್ರಭಾಸ್ ಗಮನಹರಿಸಲಿದ್ದಾರೆ ಎನ್ನಲಾಗಿದೆ. ಈಗ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳು ಡಿಸೆಂಬರ್ ಗೆ ಮುಗಿಯಲಿದೆ. ಅದಾದ ಬಳಿಕ ಕೆಲವು ಸಮಯ ಪ್ರಭಾಸ್ ಸಿನಿಮಾಗಳಿಂದ ದೂರವಿರುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ