ಪತ್ತೆದಾರಿಕೆ ಮಾಡಲು ಹೊರಟ ವಿಜಯ್ ರಾಘವೇಂದ್ರ: ಭಾವನಾ ಮೆನನ್ ಸಾಥ್
ಸೀತಾರಾಮ್ ಸಿನಿಮಾ ಬಳಿಕ ಮತ್ತೆ ರಾಘು ಪೊಲೀಸ್ ಕ್ಯಾಪ್ ತೊಡುತ್ತಿದ್ದಾರೆ. ಅವರ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾ ಘೋಷಣೆಯಾಗಿದ್ದು, ಇದಕ್ಕೆ ಕೊಂಡಾಣ ಎಂದು ಟೈಟಲ್ ಇಡಲಾಗಿದೆ.
ಈ ಸಿನಿಮಾದಲ್ಲಿ ವಿಜಯ್ ಗೆ ನಾಯಕಿಯಾಗಿ ಭಾವನಾ ಮೆನನ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೂಡಾ ಆರಂಭವಾಗಿದೆ. ಸೀತಾರಾಮ್ ಬಿನೋಯ್ ನಿರ್ದೇಶಿಸಿದ್ದ ದೇವಿ ಪ್ರಸಾದ್ ಶೆಟ್ಟಿಯೇ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.