ವಿಕ್ರಮ್ ವೇಧಾ ಚಿತ್ರ ಹಿಂದಿಗೆ ರಿಮೇಕ್. ನಾಯಕರು ಯಾರು ಗೊತ್ತಾ?
ಸೋಮವಾರ, 28 ಡಿಸೆಂಬರ್ 2020 (12:23 IST)
ಚೆನ್ನೈ : ವಿಕ್ರಮ್ ವೇಧಾ, ಪುಷ್ಕರ್ ಗಾಯತ್ರಿ ನಿರ್ದೇಶನದ ಚಿತ್ರ. ಇದು 2017ರಲ್ಲಿ ಬಿಡುಗಡೆಯಾಗಿದೆ. ಇದೀಗ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ.
ಹೌದು, ಈ ಚಿತ್ರದಲ್ಲಿ ನಟ ಮಾಧವನ್ ಮತ್ತು ವಿಜಯ್ ಸೇತುಪತಿ ವಿಕ್ರಮ್-ವೇಧಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲಾಗಿದ್ದು, ಇದರಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ವದಂತಿ ಇತ್ತು.
ಆದರೆ ಇದೀಗ ಈ ಚಿತ್ರದಲ್ಲಿ ಹಿಂದಿ ರಿಮೇಕ್ ಪಾತ್ರ ವರ್ಗಗಳ ವಿವರ ಬಿಡುಗಡೆ ಮಾಡಲಾಗಿದ್ದು, ಹೃತಿಕ್ ರೋಶನ್ ಮತ್ತು ಸೈಫ್ ಅಲಿ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ.