ಡೆವಿಲ್ ಮೇಕಿಂಗ್ ವಿಡಿಯೋದಲ್ಲಿ ವಿನೀಶ್ ಭಾಗಿ: ದರ್ಶನ್ ಪುತ್ರನ ಎಂಟ್ರಿ ಬಗ್ಗೆ ಇಲ್ಲಿದೆ ಅಪ್ಡೇಟ್ಸ್‌

Sampriya

ಗುರುವಾರ, 3 ಜುಲೈ 2025 (19:21 IST)
Photo Credit X
ರೇಣುಕಾಚಾರ್ಯ ಪ್ರಕರಣದ ಬಳಿಕ ನಟ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಪ್ಯಾಮಿಲಿ ಜತೆಗೆಯೇ ಸಿನಿಮಾದ ಶೂಟಿಂಗ್‌ಗೆ ದರ್ಶನ್‌ ಬೇರೆ ದೇಶಕ್ಕೆ ಈಚೆಗೆ ಪ್ರಯಾಣ ಬೆಳೆಸಿದ್ದರು. 

ಅದರ ಬೆನ್ನಲ್ಲೇ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ಆ ವಿಡಿಯೋದಲ್ಲಿ ದರ್ಶನ್ ಪುತ್ರ ವಿನೀಶ್ ಮೇಕಪ್ ಮಾಡಿಕೊಳ್ಳುತ್ತಿರುವುದು ಇತ್ತು. ಇದನ್ನು ನೋಡಿದವರು ದರ್ಶನ್ ಪುತ್ರ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆಂಬ ಚರ್ಚೆ ಹುಟ್ಟಿಕೊಂಡಿತ್ತು. 

ಹರಿದಾಡುತ್ತಿರುವ ವಿಡಿಯೋದಲ್ಲಿ ವಿನೀಶ್ ದರ್ಶನ್ ಮೇಕಪ್ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಇನ್ನೂ ದರ್ಶನ್‌ ಪುತ್ರನನ್ನು ಈ ಹಿಂದೆ ಐರಾವತ ಸಿನಿಮಾದ ಮೂಲಕ ಪರಿಚಯಿಸಿದ್ದರು. ಆದರೆ ಅವನ ಬದುಕಿನ ಆಯ್ಕೆಯನ್ನು ಆತನೇ ನಿರ್ಧಾರಿಸಲು ಬಿಟ್ಟಿರುವುದಾಗಿ ದರ್ಶನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಆದರೆ ವಿನೀಶ್ ಡೆವಿಲ್ ಸೆಟ್‌ನಲ್ಲಿ ಮೇಕಪ್ ಹಚ್ಚುತ್ತಿರುವುದನ್ನು ಡೆವಿಲ್ ಚಿತ್ರದಲ್ಲೂ ನಟಿಸಿದ್ದಾರಾ ಅನ್ನೋ ಕುತೂಹಲ ಮೂಡಿಸಿತ್ತು. ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ವಿನೀಶ್ ಸಿನಿಮಾದಲ್ಲಿ ನಟಿಸಿಲ್ಲ. ಸುಮ್ಮನೆ ಮೇಕಪ್ ಮಾಡಿಕೊಂಡಿದ್ದರಷ್ಟೇ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ