ಅಪ್ಪನಿಗೆ ಜಾಮೀನು ಸಿಗುತ್ತಿದ್ದ ಹಾಗೇ ಫೋಟೋ ಹಾಕಿ ಖುಷಿ ವ್ಯಕ್ತಪಡಿಸಿದ ವಿನೀಶ್‌

Sampriya

ಶುಕ್ರವಾರ, 13 ಡಿಸೆಂಬರ್ 2024 (19:14 IST)
Photo Courtesy X
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾನಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿರುವ ಖುಷಿಯಲ್ಲಿ ಮಗ ವಿನೀಶ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಟೋ ಹಂಚಿ ಸಂಭ್ರಮಿಸಿದ್ದಾರೆ.

ಮಧ್ಯಂತರ ಜಾಮೀನು ಅಡಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್‌ಗೆ ಇಂದು ಬಿಗ್‌ ರಿಲೀಫ್ ಸಿಕ್ಕಿದೆ. ಪ್ರಕರಣ ಸಂಬಂಧ ಸುದೀರ್ಘವಾದ ವಾದ ಪ್ರತಿವಾದ ಆಲಿಸಿದ ಕೋರ್ಟ್‌ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಇನ್ನು ನಟ ದರ್ಶನ್‌ಗೆ ಜಾಮೀನು ಸಿಕ್ಕಿರುವುದಕ್ಕೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್ ಹಾಕಿ ಸಂಭ್ರಮಿಸಿದ್ದಾರೆ. ಅದಲ್ಲದೆ ದರ್ಶನ್ ಅವರ ಆಪ್ತ ವಲಯದವರಾದ ನಟಿ ರಕ್ಷಿತಾ ಪ್ರೇಮ್, ತರುಣ್ ಸುಧೀರ್, ನಟ ಧನ್ವೀರ್‌, ಸೋನಲ್ ಅವರು ಕೂಡಾ ಖುಷಿ ವ್ಯಕ್ತಪಡಿಸಿದ್ದಾರೆ.

ದರ್ಶನ್‌ಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಫೋಸ್ಟ್ ಹಾಕಿದ್ದರು. ಇದೀಗ ಅಪ್ಪನಿಗೆ ಜಾಮೀನು ಮಂಜೂರು ಆಗುತ್ತಿದ್ದ ಹಾಗೇ ವಿನೀಶ್  ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ