ಕಂಗನಾಳನ್ನು ಹಾಡಿ ಹೊಗಳಿದ ವಿಶಾಲ್ ಭಾರದ್ವಾಜ್

ಮಂಗಳವಾರ, 13 ಅಕ್ಟೋಬರ್ 2015 (11:13 IST)
ಕಟ್ಟಿ ಬಟ್ಟಿ ಸಿನಿಮಾದ ಬಳಿಕ ನಟಿ ಕಂಗನಾ ರನೌತ್ ವಿಶಾಲ್ ಭಾರದ್ವಾಜ್ ನಿರ್ದೇಶನದ ರಂಗೂನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತ್ರಿಕೋನ ಪ್ರೇಮ ಕಥೆಯಿರುವ ಈ ಸಿನಿಮಾದಲ್ಲಿ ಕಂಗನಾ ಜೊತೆಗ ಶಾಹೀದ್ ಕಪೂರ್ ಹಾಗೂ ಸೈಫ್ ಆಲಿಖಾನ್ ಕೂಡ ನಟಿಸುತ್ತಿದ್ದಾರೆ. ಆದ್ರೆ ಈ ಸಿನಿಮಾ ತೆರೆಗೆ ಬರೋ ಮೊದಲೇ ತಮ್ಮ ಸಿನಿಮಾದ ನಟಿಯನ್ನು ಹಾಡಿ ಹೊಗಳಿದ್ದಾರೆ ನಿರ್ದೇಶಕ ವಿಶಾಲ್.
ಕಂಗನಾ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಶಾಲ್ ಕಂಗನಾ ಸದ್ಯ ಬಾಲಿವುಡ್ ನಲ್ಲಿರುವ ಉತ್ತಮ ನಟಿಯರಲ್ಲಿ ಒಬ್ಬರು ಎಂದಿದ್ದಾರೆ. ನಾನು ಯಾವಾಗಲೂ ಇಂತಹ ನಟರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದರಲ್ಲೂ ಇರ್ಫಾನ್ ಖಾನ್ ಹಾಗೂ ಕಂಗನಾ ಜೊತೆ ಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಇಬ್ಬರೂ ಅದ್ಭುತ ನಟರು ಎಂದಿದ್ದಾರೆ.
 
ರಂಗೂನ್ ಸಿನಿಮಾ ತಂಡ ನವೆಂಬರ್ ಮಧ್ಯದಲ್ಲಿ ತನ್ನ ಶೂಟಿಂಗ್ ಅನ್ನು ಆರಂಭಿಸಲಿದೆ. ಸಿನಿಮಾ ಇನ್ನಿಬ್ಬರು ನಟರಾದ ಸೈಫ್ ಆಲಿಖಾನ್ ಹಾಗೂ ಶಾಹೀದ್ ಕಪೂರ್ ಗೆ ಈಗಾಗಲೇ ವಿಶಾಲ್ ಜೊತೆ ಅಭಿನಯಿಸಿರುವ ಅನುಭವವಿದೆ. ಹಾಗಾಗಿ ಈ ತಂಡ ಒಂದು ಹೊಸಬಗೆಯ ಸಿನಿಮಾ ನೀಡುತ್ತೆ ಅನ್ನೋದು ಅಭಿಮಾನಿಗಳ ನಿರೀಕ್ಷೆ.

ವೆಬ್ದುನಿಯಾವನ್ನು ಓದಿ