ರಣವೀರ್ ಆಯ್ತು ಈಗ ಜ್ವಾಲಾ ಗುಟ್ಟಾ ಪತಿ ವಿಷ್ಣು ವಿಶಾಲ್ ಸರದಿ! ಕ್ಯಾಮರಾ ಮುಂದೆ ನಗ್ನರಾದ ವಿಷ್ಣು!
ಇದೀಗ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಪತಿ, ನಟ ವಿಷ್ಣು ವಿಶಾಲ್ ಕೂಡಾ ನಗ್ನವಾಗಿ ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ ವಿಷ್ಣು ವಿಶಾಲ್ ರ ಫೋಟೋ ತೆಗೆದಿದ್ದು ಸ್ವತಃ ಪತ್ನಿ ಜ್ವಾಲಾ ಗುಟ್ಟಾ! ವಿಷ್ಣು ರಣವೀರ್ ಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ. ರಣವೀರ್ ಕನಿಷ್ಠ ಒಳ ಉಡುಪನ್ನಾದರೂ ತೊಟ್ಟುಕೊಂಡಿದ್ದರು. ಆದರೆ ವಿಷ್ಣು ವಿಶಾಲ್ ಅದನ್ನೂ ಕಿತ್ತೆಸೆದಿದ್ದಾರೆ. ಅವರ ಈ ನಗ್ನ ಪೋಸ್ ಗೆ ನೆಟ್ಟಿಗರು ಕಿಡಿ ಕಾರಿದ್ದಾರೆ. ನಿಮಗೆಲ್ಲಾ ಏನಾಗಿದೆ? ಇಂತಹ ಅಸಭ್ಯ ಪೋಸ್ ನೀಡಿ ಟ್ರೆಂಡ್ ಎಂದು ಹೆಸರು ಹೇಳುತ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.