ವಿಷ್ಣುವರ್ಧನ್ ಕುರಿತ ಪೋಸ್ಟ್ ಗೆ ಕಾಮೆಂಟ್: ಕ್ರಿಕೆಟಿಗ ಹರ್ಷಲ್ ಗಿಬ್ಸ್ ವಿರುದ್ಧ ಆಕ್ರೋಶ

ಶುಕ್ರವಾರ, 18 ಸೆಪ್ಟಂಬರ್ 2020 (12:25 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಬರ್ತ್ ಡೇ ನಿಮಿತ್ತ ಅವರ ಸಿಡಿಪಿ ಬಿಡುಗಡೆ ಮಾಡಿ ಕಿಚ್ಚ ಸುದೀಪ್ ಪ್ರಕಟಿಸಿದ ಪೋಸ್ಟ್ ಒಂದಕ್ಕೆ ಹಗುರವಾಗಿ ಕಾಮೆಂಟ್ ಮಾಡಿದ್ದಕ್ಕೆ ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ ಮೇಲೆ ಅಭಿಮಾನಿಗಳು ಸಿಟ್ಟಾಗಿದ್ದಾರೆ.


ಕಿಚ್ಚ ಸುದೀಪ್ ರ ಎಲ್ಲಾ ಇನ್ ಸ್ಟಾಗ್ರಾಂ ಫೋಟೋಗಳಿಗೂ ಗಿಬ್ಸ್ ಕಾಮೆಂಟ್ ಮಾಡುತ್ತಾರೆ. ಈಗ ಸುದೀಪ್ ವಿಷ್ಣುವರ್ಧನ್ ಬಗ್ಗೆ ಭಾವುಕರಾಗಿ ಸಂದೇಶ ಬರೆದು ಪೋಸ್ಟ್ ಮಾಡಿದ್ದಕ್ಕೂ ಗಿಬ್ಸ್ ಕಾಮೆಂಟ್ ಮಾಡಿದ್ದರು. ಆದರೆ ವಿಷ್ಣುದಾದ ಬಗ್ಗೆ ಕಿಚ್ಚ ಮಾಡಿದ ಪೋಸ್ಟ್ ಗೆ ‘ನಾವಿಬ್ಬರೂ ಮುಂದಿನ ಬಾರಿ ಒಟ್ಟಿಗೆ ಸಿನಿಮಾ ಮಾಡೋಣ ಬಿಡು ಗೆಳೆಯ’ ಎಂದು ಸ್ಮೈಲಿ ಜತೆಗೆ ಕಾಮೆಂಟ್ ಮಾಡಿದ್ದರು. ಗಿಬ್ಸ್ ಈ ರೀತಿ ವಿಷ್ಣುವರ್ಧನ್ ಕುರಿತ ಪೋಸ್ಟ್ ಗೆ ಹಗುರವಾಗಿ ಪೋಸ್ಟ್ ಮಾಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಷ್ಣುವರ್ಧನ್ ಬಗ್ಗೆ ತಿಳಿದುಕೊಂಡು ಕಾಮೆಂಟ್ ಮಾಡಿ, ಕಿಚ್ಚ ಸುದೀಪ್ ಯಾವ ಭಾವನೆಯಿಂದ ಈ ಪೋಸ್ಟ್ ಮಾಡಿದ್ದಾರೆ ಎಂದು ಅರಿತು ಕಾಮೆಂಟ್ ಮಾಡಿ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ