ನನ್ನ ಸತೀಶ್ ಪ್ರಧಾನ ಜೊತೆ ಲವ್ವಿ ಡವ್ವಿ ಇಲ್ಲ ನಂಬಿ ಪ್ಲೀಸ್ ಪ್ಲೀಸ್ !!

ಶುಕ್ರವಾರ, 17 ಅಕ್ಟೋಬರ್ 2014 (12:14 IST)
ಪೂಜಾ ಗಾಂಧಿ ಬಗ್ಗೆ ಮತ್ತೆ ಹೀಗೊಂದು ಸುದ್ದಿ ಹರಡಿದೆ. ಆದರೆ ಅದನ್ನು ಆಕೆ ಅಲ್ಲೆಗಳೆದರೂ ಸಹಿತ ಆ ಸುದ್ದಿ ಮತ್ತೆ ಮತ್ತೆ ಹೆಚ್ಚು  ಜನರ ಮಾತಿಗೆ ಗ್ರಾಸ ಆಗಿದೆ ಎಂದೇ ಹೇಳ ಬಹುದು 
 
ಗಾಂಧಿ ನಗರದಲ್ಲಿ. ಸಿನಿಮಾ, ರಾಜಕೀಯ, ನಟನೆ, ನಿರ್ಮಾಣ ಹೀಗೆ ಹಲವಾರು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೂಜಾಗಾಂಧಿ ಇನ್ನೇನು ಮದುವೆ ಆಗೇ ಹೋಗ್ತಾರೆ ಎನ್ನುವಾಗ ಆಕೆಯ ಕನಸು ತಕ್ಷಣವೇ ಮುರಿದು ಬಿದ್ದ ದುರಂತ ಕಥೆ ಎದುರಾಗಿತ್ತು. 
 
ಆದರೂ ಸಹಿತ ಆ ಹೆಣ್ಣುಮಗಳು ಅದರ ಬಗ್ಗೆ ಹೆಚ್ಚು ಚಿಂತಿಸುತ್ತಾ ಕೂರದೆ ಮುನ್ನುಗ್ಗಿದ್ದು ಮಾತ್ರ ಪೂಜಾ ದಿಟ್ಟತನದ ಸಾಕ್ಷಿಯಾಗಿದೆ. ಅದಾದ ಬಳಿಕ ಆಕೆ ಅಭಿನೇತ್ರಿ ಚಿತ್ರದಲ್ಲಿ ಹಣ ಹೂಡಿಕೆ ಮಾಡಿ  ಆ ಚಿತ್ರವು ಸಹಿತ ಅನೇಕ ವಿವಾದಗಳನ್ನು ಎದುರಿಸಿದ್ದು , ಅದರಿಂದ ಹೊರ ಬಂದಿದ್ದು ಎಲ್ಲವು ಈಗ ಹಳೆಯ ಕಥೆ. 
 
ಈಗ ಹೆಚ್ಚು ಗಟ್ಟಿಯಾಗಿ ಹರಡಿರುವ ಸಂಗತಿ ಎಂದರೆ..ಬೆತ್ತಲೆ ಬೆನ್ನಿನ ಈ ಸುಂದರಿ ಪ್ರಣಯದ ಸಂಗತಿ. ಆಕೆ ಅಭಿನೇತ್ರಿ ಚಿತ್ರದ ನಿರ್ದೇಶಕ ಸತೀಶ್ ಪ್ರಧಾನ ಅವರನ್ನು ಲವ್ ಮಾಡ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿದ್ದು... ಈ ಜೋಡಿ ಎಲ್ಲಾ ಕಡೆ ಒಟ್ಟಾಗಿ ಓಡಾಡುತ್ತಿರುತ್ತಾರೆ ಎನ್ನುವ ಸಂಗತಿಯು ಸಹಿತ ಹೆಚ್ಚು ಗಮನ ಸೆಳೆದಿದೆ. ತನಗಿಂತ ನಾಲ್ಕು ವರ್ಷ ಕಿರಿಯನಾಗಿರುವ ಸತೀಶ್ ಹಿಂದೆ ಆಕೆಯ ಮನಸ್ಸು ಓಡಾಡುತ್ತಿದೆ. ಸತೀಶ್ ಪ್ರಧಾನ್ ಜೊತೆ ಲಾಂಗ್ ಡ್ರೈವ್ ಗೆಂದು ಹೋದ ಪೂಜಾ ವಿಷ್ಯ ಪ್ರಸ್ತುತ ಸ್ಯಾಂಡಲ್‌ವುಡ್ ವಾಸಿಗಳ ಮಾತಿಗೆ ಗ್ರಾಸವಾಗಿದೆ. 
 
ಈ ಸಂಗತಿ ಹೊರಗೆ ಬರುತ್ತಿದ್ದಂತೆ ಇವರಿಬ್ಬರ ನಡುವೆ ಏನೇನೋ ನಡೆಯುತ್ತಿದೆ ಎನ್ನುವ ಸುದ್ದಿ ಹರಡಿದ್ದಾರೆ ಮಂದಿ. ಆ ಕಾರ್ ನಲ್ಲಿ ಲಾಂಗ್ ಡ್ರೈವ್ ಹೋಗಿ ಬೆಂಗಳೂರನ್ನು ಸುತ್ತಿ ಬಂದ  ಇವರಿಬ್ಬರ ಮುಖ ತುಂಬಾ ಅಲಸಿಕೆಯಿಂದ ಕೂಡಿತ್ತಂತೆ! ಇದನ್ನು ಕಂಡು ಮಂದಿ ಗುಸುಗುಸುಪಿಸುಪಿಸು!! ಆ ಸಂಗತಿ ಪೂಜಾ ಕಿವಿ ಮೇಲೆ ಬಿದ್ದಾಗ ಆಕೆ ಅಯ್ಯೋ ಅಂತಾದ್ದೇನು ಇಲ್ಲ, ತುಂಬಾ ದಣಿದ ಸಮಯದಲ್ಲಿ ಇಂತಹ ಲಾಂಗ್ ಡ್ರೈವ್  ಹೆಚ್ಚು ಉಪಯುಕ್ತ ಎಂದು ಹೇಳಿದ್ದಾರೆ..ಹೌದಾ ಪೂಜಾ ಅಂತ ಕೇಳ್ತಾ ಇದ್ದಾರೆ ಜನರು !
 

ವೆಬ್ದುನಿಯಾವನ್ನು ಓದಿ