ರಾಯೀಸ್ ಸಿನಿಮಾದಲ್ಲಿ ನಾವಿಬ್ಬರು ಚೆನ್ನಾಗಿ ಕಾಣುತ್ತೇವೆ: ಶಾರುಖ್ ಖಾನ್

ಶನಿವಾರ, 10 ಅಕ್ಟೋಬರ್ 2015 (11:56 IST)
ಶಾರುಖ್ ಖಾನ್ ಹಾಗೂ ಪಾಕಿಸ್ತಾನಿ ಮಹೀರಾ ಖಾನ್ ರಾಯೀಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ತಮ್ಮ ದಿಲ್ ವಾಲೇ ಸಿನಿಮಾದಲ್ಲಿನ ಕಾಜೋಲ್ ಹಾಗೂ ಶಾರುಖ್ ಫೋಟೋವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಇದನ್ನು ನೋಡಿ ಮಹೀರಾ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಅಂತಾ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್ ರಾಯೀಸ್ ಸಿನಿಮಾದಲ್ಲೂ ನಾವು ಇದೇ ರೀತಿ ಚೆನ್ನಾಗಿ ಕಾಣುತ್ತೇವೆ ಎಂದಿದ್ದಾರೆ.
ಸದ್ಯ ದಿಲ್ ವಾಲೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ಶಾರುಖ್ ಆ ಬಳಿಕ ರಾಯೀಸ್  ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿನಿಮಾದಲ್ಲಿ ಮಹೀರಾ ಖಾನ್ ಶಾರುಖ್ ಗೆ ಜೋಡಿಯಾಗಲಿದ್ದಾರೆ. ರಾಹುಲ್ ಧೋಲಾಕಿಯಾ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
 
ರಾಯೀಸ್ ಸಿನಿಮಾ ಕೂಡ ಬಾಲಿವುಡ್ ನಲ್ಲಿ ತುಂಬಾನೇ ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ. ಅದಕ್ಕಿಂತ ಮೊದಲು ಶಾರುಖ್ ಕಾಜೋಲ್ ಜೋಡಿಯ  ದಿಲ್ ವಾಲೇ ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಿದ್ದು ಡಿಸೆಂಬರ್ 18 ರಂದು ಸಿನಿಮಾ ರಿಲೀಸ್ ಆಗಲಿದೆ. 

ವೆಬ್ದುನಿಯಾವನ್ನು ಓದಿ