ಮತ್ತೆ ಬರಲಿದೆ ವೀಕೆಂಡ್ ವಿತ್ ರಮೇಶ್

ಸೋಮವಾರ, 11 ಅಕ್ಟೋಬರ್ 2021 (09:04 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಮೂಡಿಬರಲಿದೆ.


ಹಲವು ಕ್ಷೇತ್ರಗಳ ಸಾಧಕರನ್ನು ವೇದಕೆ ಕರೆತಂದು ಅವರ ಜೀವನಗಾಥೆಯನ್ನು ತೆರೆದಿಡುವ ಈ ಜನಪ್ರಿಯ ಕಾರ್ಯಕ್ರಮ ಎಲ್ಲರ ಅಚ್ಚುಮೆಚ್ಚಿದ್ದಾಗಿದೆ. ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮ ಮತ್ತೆ ಬರಲಿದೆ.

ಆದರೆ ಈ ಬಾರಿ ಟಿವಿಯಲ್ಲಿ ಬರಲ್ಲ. ಬದಲಾಗಿ ಜೀ5 ಆಪ್‍ ನಲ್ಲಿ ಕೊಂಚ ಬದಲಾವಣೆಗೊಳೊಂದಿಗೆ ಮೂಡಿಬರಲಿದೆ. ಸದ್ಯದಲ್ಲೇ ಈ ಬಗ್ಗೆ ಪ್ರಕಟಣೆ ಹೊರಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ