ಸಾವಿಗೆ ಒಂದು ದಿನ ಮುಂಚೆ ಮೂರು ಪೋಸ್ಟ್: ಸೌಜನ್ಯ ಸಾವಿನ ಹಿಂದೆ ಅನುಮಾನ
ಸಾವಿಗೆ ಕೇವಲ ಒಂದು ದಿನ ಮುಂಚೆ ಅಂದರೆ ನಿನ್ನೆಯಷ್ಟೇ ಸೌಜನ್ಯ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಮೂರು ಫೋಟೋ ಪ್ರಕಟಿಸಿದ್ದರು. ಇದರಲ್ಲಿ ಕೊನೆಯ ಫೋಟೋ ಕುಟುಂಬದ ಜೊತೆಗಿದ್ದ ಸಂತೋಷದ ಕ್ಷಣದ ಫೋಟೋ. ಈ ಫೋಟದಲ್ಲಿ ಸೌಜನ್ಯ ತಮ್ಮ ಕುಟುಂಬದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇನ್ನು, ಇದಕ್ಕೂ ಮೊದಲು ಪ್ರಕಟಿಸಿದ ಎರಡು ಫೋಟೋಗಳಲ್ಲಿ ತಮಗೆ ಬೆಂಬಲವಾಗಿ ನಿಂತ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪೊಲೀಸರು ಈಗ ಈ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.