ಶಾಹೀದ್ ಮದುವೆಗೆ ಭರ್ಜರಿ ತಯಾರಿ

ಗುರುವಾರ, 2 ಜುಲೈ 2015 (10:13 IST)
ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಶಾಹೀದ್ ಕಪೂರ್ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದಾರೆ. ಬಾಲಿವುಡ್ ನ ಈ ಸ್ಮಾರ್ಟ್ ಬಾಯ್ ಮದುವೆ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚುತ್ತಿರುವಾಗಲೇ ಶಾಹೀದ್ ಮದುವೆಯ ಇನ್ವಿಟೇಷನ್ ಬಹಿರಂಗವಾಗಿದೆ. ಮೀರಾ- ಶಾಹೀದ್ ಕಪೂರ್ ಮದುವೆಯ ಆಮಂತ್ರಣ ಪತ್ರಿಕೆ ಈಗಾಗಲೇ ಬಾಲಿವುಡ್ ಸ್ಟಾರ್ ಗಳ ಕೈ ಸೇರಿದೆ.
ಅಂದ್ಹಾಗೆ ಸುಂದರವಾಗಿ ಮುದ್ರಣಗೊಂಡಿರುವ ಮದುವೆಯ ಕರೆಯೋಲೆಯಲ್ಲಿ ಮದುವೆಯ ಮುಹೂರ್ತ , ಮದುವೆಯ ನಡೆಯುವ ಸ್ಥಳದ ಬಗ್ಗೆ ತಿಳಿಸಲಾಗಿದೆ. ದೆಹಲಿಯ ಗುರ್ಗಾಂವ್ ನ ಒಬೆರಾಯ್ ಹೋಟೆಲ್ ನಲ್ಲಿ ಶಾಹಿದ್ ಮೀರಾ ಕೈ ಹಿಡಿಯಲಿದ್ದಾರೆ.  ಜುಲೈ 7 ರಂದು ನಡೆಯಲಿರುವ ಬಹು ನಿರೀಕ್ಷಿತ ಮದುವೆ ಸಮಾರಂಭಕ್ಕೆ ಈಗಾಗಲೇ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅಲ್ಲದೇ ಇತ್ತ ಬಾಲಿವುಡ್ ಸಿನಿ ತಾರೆಯರು ಕೂಡ ವಿವಾಹದಲ್ಲಿ ಪಾಲ್ಗೊಳ್ಳೋಕೆ ಉತ್ಸುಕರಾಗಿದ್ದಾರಂತೆ. ಆದ್ರೆ ಮದುವೆಗೆ ಯಾರೂ ಯಾವುದೇ ಉಡುಗೊರೆ ತರಬೇಡಿ ಅಂತಾ ಆಮಂತ್ರಣ ಪತ್ರಿಕೆಯಲ್ಲಿಯೇ ತಿಳಿಸಲಾಗಿದೆ.
 
ಇನ್ನು ಶಾಹೀದ್ ಮದುವೆಯ ದಿನ ಯಾವ ಥರಾ ಉಡುಪು ಧರಿಸುತ್ತಾರೆ. ಮೀರಾ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನುವ ಬಗ್ಗೆ ಎಲ್ಲರಲ್ಲೂ ಕುತೂಹಲವಿರೋದು ಸಹಜ. ಇದರ ಬಗ್ಗೆಯೂ ಕೆಲ ಮಾಹಿತಿ  ಹೊರ ಬಿದ್ದಿದೆ. ಅಂದ್ಹಾಗೆ ಮದುವೆಯ ದಿನ ಶಾಹೀದ್ ಡಿಸೈನರ್ ಕುನಾಲ್ ರಾವಲ್ ಅವರ ಸಿದ್ಧಪಡಿಸಿದ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಇನ್ನು ಮೀರಾ ಅನಾಮಿಕಾ ಖನ್ನಾ ಸಿದ್ಧಪಡಿಸಿದ ಉಡುಪಿನಲ್ಲಿ ಮಿಂಚಲಿದ್ದಾರೆ. ಆದ್ರೆ ಶಾಹೀದ್ ಆಗಲಿ ಮೀರಾ ಆಗಲಿ ತಮ್ಮ ಮದುವೆ ಉಡುಪಿನ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ. 

ವೆಬ್ದುನಿಯಾವನ್ನು ಓದಿ