ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ಬಗ್ಗೆ ಫಿಲ್ಮ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಹೇಳಿದ್ದೇನು?

ಬುಧವಾರ, 2 ಸೆಪ್ಟಂಬರ್ 2020 (12:19 IST)
ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ಶಾಕ್ ಆಗಿದೆ ಎಂದು ಫಿಲ್ಮ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಹೇಳಿದ್ದಾರೆ.

ಫಿಲ್ಮ ಚೇಂಬರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಿಲ್ಮ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್, 75 ವರ್ಷಗಳ ಚಿತ್ರರಂಗದ ಇತಿಹಾಸದಲ್ಲಿ ಇಂಥದ್ದನ್ನ ಕೇಳಿಲ್ಲ. ತೆವಲಿಗೆ ಬಂದ ಕೆಲವು ಕಲಾವಿದರಿಂದ ಇಂತಹ ಸ್ಥಿತಿ ಬಂದಿದೆ. ಒಂದೆರಡು ಚಿತ್ರ ಮಾಡಿದವರನ್ನ ಕಲಾವಿದರೆಂದು ಒಪ್ಪಲಾಗಲ್ಲ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿರುವುದು ಸಾಬೀತಾಗಲಿ. ಹೆಸರು ಹೊರಗಡೆ ಬಂದರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ