ಸಲಿಂಗಕಾಮಿ ಎಂದ ರಾಖಿ ಸಾವಂತ್ ಗೆ ತನುಶ್ರೀ ದತ್ತಾ ಹೇಳಿದ್ದೇನು ಗೊತ್ತಾ?
ಶನಿವಾರ, 10 ನವೆಂಬರ್ 2018 (07:17 IST)
ಮುಂಬೈ : ನಟಿ ತನುಶ್ರೀ ದತ್ತಾ ತನ್ನನ್ನು ಸಲಿಂಗಕಾಮಿ ಎಂದು ಹೇಳಿದ ನಟಿ ರಾಖಿ ಸಾವಂತ್ ಅವರನ್ನು ಮಂಗಳಮುಖಿ ಎಂದು ಟೀಕಿಸಿದ್ದಾರೆ.
ನಟಿ ರಾಖಿ ಸಾವಂತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ತನುಶ್ರೀ ನನ್ನ ಮೇಲೆ ರೇಪ್ ಮಾಡಿದ್ದರು. ಆಕೆ ಒಬ್ಬ ಸಲಿಂಗ ಕಾಮಿ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ನಟಿ ತನುಶ್ರೀ ದತ್ತಾ,’ ರಾಖಿ ಅವರು ಮಂಗಳ ಮುಖಿ ಎಂಬ ದೊಡ್ಡ ಗಾಳಿ ಸುದ್ದಿಯೊಂದು ಇಂಡಸ್ಟ್ರಿಯಲ್ಲಿ ಓಡಾಡುತ್ತಿದೆ. ಜನರಿಗೆ ರಾಖಿ ಯಾರೆಂದು ಗೊತ್ತು. ಚಾನ್ಸ್ ಕೊಡುತ್ತಾರೆ ಎಂದರೆ ಕಾಸ್ಟಿಂಗ್ ಕೌಚ್ಗೆ ನಾನು ಸಿದ್ಧ ಎಂದು ರಾಖಿ ಅವರು ಈ ಹಿಂದೆ ಹೇಳಿದ್ದರು. ಹಾಗಂತ ರಾಖಿ ಅವರ ಬಗ್ಗೆ ನನಗೆ ಕೋಪ ಇಲ್ಲ. ಬದುಕಿನಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಯೋಚಿಸುವ ಶಕ್ತಿ ದೇವರು ಅವರಿಗೆ ಕೊಡಲಿ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.