ಆದಿತ್ಯಾ ರಾಯ್ ಕಪೂರ್ ಮನೆ ಮುಂದೆ ಆರು ದಿನ ಕಾದು ಕುಳಿತಿದ್ದ ಅಭಿಮಾನಿ

ಶುಕ್ರವಾರ, 12 ಫೆಬ್ರವರಿ 2016 (11:23 IST)
ಸಿನಿಮಾ ತಾರೆಯರೆಂದರೆ ಸಾಕು ಕೆಲ ಅಭಿಮಾನಿಗಳು ಜೀವ ಕೊಡೋದಕ್ಕೆ ರೆಡಿ ಅನ್ನುವಷ್ಟು ಮಟ್ಟಿಗೆ ಹಚ್ಚಿ ಕೊಂಡಿರುತ್ತಾರೆ. ಆದಿತ್ಯಾ ರಾಯ್ ಕಪೂರ್ ಅವರು ಕೂಡ ಅಭಿಮಾನಿಗಳು ಯಾವ ರೀತಿ ಇರುತ್ತಾರೆ ಅನ್ನೋದಕ್ಕೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಹೇಳಿದ್ದಾರೆ.

 
ಆದಿತ್ಯಾ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ಆಶಿಕಿ-2 ಸಿನಿಮಾ ರಿಲೀಸ್ ಆದ ಬಳಿಕ ಆದಿತ್ಯಾ ಅವರಿಗೆ ಸಿಕ್ಕಾ ಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ. ಅದರಲ್ಲೂ ಕೋಲ್ಕತ್ತಾ ಮೂಲದ ಯುವತಿಯೊಬ್ಬಳು ಆದಿತ್ಯಾ ಅವರನ್ನು ಭೇಟಿ ಮಾಡೋದಕ್ಕಾಗಿ ಅವರ ಮನೆ ಮುಂದೆ ಆರು ದಿನಗಳ ಕಾಲ ಕಾದು ಕುಳಿತಿದ್ದಳಂತೆ. ಬಳಿಕ ನಾನು ಅವಳ ಬಳಿ ಮಾತನಾಡಿ ಅವಳನ್ನು ಕಳುಹಿಸಿದೆ ಅಂತಾ ಆದಿ ಹೇಳಿದ್ದಾರೆ.
 
ಇನ್ನು ತಮ್ಮ ಪ್ರೇಮ ಜೀವನದ ಬಗ್ಗೆ ಹೇಳಿರುವ ಆದಿತ್ಯಾ ನಾನು 9 ನೇ ತರಗತಿಯಲ್ಲಿರುವಾಗಲೇ ಹುಡುಗಿಯನ್ನು ಪ್ರೀತಿಸುತ್ತಿದ್ದೆ . ನಾವಿಬ್ಬರು ಸುತ್ತಾಡೋಕು ಹೋಗಿದ್ದೆವು. ಅಲ್ಲಿ ಸ್ಯಾಂಡ್ ವಿಚ್ ತಿಂದು ವಾಪಸ್ಸಾಗಿದ್ದೆವು ಅಂತಾ ಆದಿತ್ಯಾ ಹೇಳಿದ್ದಾರೆ. ಇಂದಿಗೂ ಆ ದಿನಗಳನ್ನು ನೆನಸಿಕೊಂಡ್ರೆ ನಗು ಬರುತ್ತೆ ಅಂತಾ ಆದಿತ್ಯಾ ರಾಯ್ ಕಪೂರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ