ನಟ ಸುಶಾಂತ್ ಸಿಂಗ್ ರಜಪೂತ ಆರಾಧಿಸುತ್ತಿದ್ದ ದೇವರು ಯಾರು?

ಸೋಮವಾರ, 17 ಆಗಸ್ಟ್ 2020 (18:50 IST)
ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಕೇಸ್ ತನಿಖೆ ನಡೆಯುತ್ತಿದೆ.

ಈ ನಡುವೆ ಭಾವನಾತ್ಮಕ ಥ್ರೋಬ್ಯಾಕ್ ವೀಡಿಯೊದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಮನೆಯಲ್ಲಿ ಶಿವ ಶ್ಲೋಕವನ್ನು ಹಾಡಿರೋದು ವೈರಲ್ ಆಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ಸ್ಯಾಮ್ಯುಯೆಲ್ ಹಾಕಿಪ್ ಹಂಚಿಕೊಂಡಿರುವ ವಿಡಿಯೋ ಅಭಿಮಾನಿಗಳನ್ನು ಭಾವುಕರನ್ನಾಗಿ ಮಾಡಿದೆ.

ಸುಶಾಂತ್ ಸಿಂಗ್ ಮನೆಯಲ್ಲಿ ಶಿವ ಶ್ಲೋಕ ಹಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್‌ಗೆ ನ್ಯಾಯ ಕೋರಿ ಆಂದೋಲನದ ಒಂದು ಪ್ರಮುಖ ಅಂಶವೆಂದರೆ ಅವರ ಕುಟುಂಬ ಮತ್ತು ಅಭಿಮಾನಿಗಳು ಶಿವನನ್ನು ಹೇಗೆ ಪ್ರಾರ್ಥಿಸುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ.

ದಿವಂಗತ ನಟ, ಕೇದಾರನಾಥ ತೀರ್ಥಯಾತ್ರೆಯನ್ನು ಆಧರಿಸಿದ ಚಿತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಶಿವನ  ದೈವ ಭಕ್ತನೆಂದು ಹೇಳಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ