ಇನ್ ಸ್ಟಾಗ್ರಾಂನಲ್ಲಿ ಟಾಪ್ 5 ಫಾಲೋವರ್ಸ್ ಇರುವ ಸ್ಟಾರ್ ನಟರು ಯಾರು?

ಮಂಗಳವಾರ, 11 ಜುಲೈ 2023 (08:30 IST)
ಬೆಂಗಳೂರು: ಸ್ಟಾರ್ ನಟರು ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪವನ್ ಕಲ್ಯಾಣ್ ಕೂಡಾ ಇನ್ ಸ್ಟಾಗ್ರಾಂ ಸೇರಿಕೊಂಡು ಗಂಟೆಗಳಲ್ಲೇ ಸಾಕಷ್ಟು ಫಾಲೋವರ್ ಗಳನ್ನು ಪಡೆದಿದ್ದರು. ಹಾಗಿದ್ದರೆ ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿದ ಟಾಪ್ 5 ಸ್ಟಾರ್ ಗಳು ಯಾರು ನೋಡೋಣ.

ಅಲ್ಲು ಅರ್ಜುನ್ ನಂ.1: ಪುಷ್ಪ ಸ್ಟಾರ್ ಗೆ ಇನ್ ಸ್ಟಾಗ್ರಾಂನಲ್ಲಿ 21.6 ಮಿಲಿಯನ್ ಫಾಲೋವರ್ ಗಳಿದ್ದಾರೆ. 20 ಮಿಲಿಯನ್ ಫಾಲೋವರ್ ಗಳನ್ನು ದಾಟಿದ ದಕ್ಷಿಣ ಭಾರತದ ಮೊದಲ ನಟ ಅವರು.
ವಿಜಯ್ ದೇವರಕೊಂಡ: ಚಾಕಲೇಟ್ ಬಾಯ್ ಇಮೇಜ್ ನಿಂದ ಹುಡುಗಿಯರ ಹೃದಯ ಗೆದ್ದಿದ್ದ ವಿಜಯ್ ದೇವರಕೊಂಡಗೆ 18.6 ಮಿಲಿಯನ್ ಫಾಲೋವರ್ ಗಳಿದ್ದಾರೆ.
ರಾಮ್ ಚರಣ್ ತೇಜ: ಆರ್ ಆರ್ ಆರ್ ಸಿನಿಮಾ ಬಳಿಕ ಗ್ಲೋಬಲ್ ಸ್ಟಾರ್ ಆಗಿರುವ ರಾಮ್ ಚರಣ್ ತೇಜಗೆ 16 ಮಿಲಿಯನ್ ಫಾಲೋವರ್ ಗಳಿದ್ದಾರೆ.
ರಾಕಿಂಗ್ ಸ್ಟಾರ್ ಯಶ್: ಕೆಜಿಎಫ್ ನ ರಾಕಿ ಭಾಯಿಗೆ 13.6 ಮಿಲಿಯನ್ ಫಾಲೋವರ್ ಗಳಿದ್ದಾರೆ. ಅವರು ಕನ್ನಡದ ನಂ.1 ಜನಪ್ರಿಯ ನಟ.
ದುಲ್ಕರ್ ಸಲ್ಮಾನ್: ಮಲಯಾಳಂ ಮೂಲದ ದುಲ್ಕರ್ ಸಲ್ಮಾನ್ ತೆಲುಗು, ತಮಿಳಿನಲ್ಲೂ ಅಭಿನಯಿಸಿ ಪಾಪ್ಯುಲರ್ ಆಗಿದ್ದಾರೆ. ಅವರಿಗೆ 12.6 ಮಿಲಿಯನ್ ಇನ್ ಸ್ಟಾ ಫಾಲೋವರ್ಸ್ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ