ಬೆಂಗಳೂರು: ಉಡುಪಿ, ಮಂಗಳೂರು ಕಡಲ ಕಿನಾರೆಯಲ್ಲಿ ಈ ಒಂದು ಗುಂಪು ಓಡಾಡಿಕೊಂಡಿದ್ದರಂತೆ. ಆ ಗುಂಪು ಯಾರದ್ದು? ಕಿನಾರೆ ಚಿತ್ರತಂಡದವರದ್ದು.
ದೇವರಾಜ್ ಪೂಜಾರಿ ಚೊಚ್ಚಲ ನಿರ್ದೇಶನದ ಕಿನಾರೆ ಚಿತ್ರತಂಡ ಕರಾವಳಿಯ ಕಡಲ ತೀರಗಳಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಈಗಾಗಲೇ ಒಂದನೇ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಎರಡನೇ ಹಂತ ಚಿತ್ರೀಕರಣಕ್ಕಾಗಿ ಕರಾವಳಿಗೆ ಬಂದಿಳಿದಿತ್ತು. ಕೆಲವು ಚೇಸಿಂಗ್ ದೃಶ್ಯಗಳನ್ನು ಇಲ್ಲಿ ಅಭಿಷೇಕ್ ಜಿ ಕಾಸರಗೋಡು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುತ್ತಿತ್ತು.
ರೆಡ್ ಆಪಲ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಸತೀಶ್ ರಾಜ್ ಎನ್ನುವ ಹೊಸ ಹುಡುಗ ನಾಯಕನಾಗಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ಅಭಿನಯಿಸಿ ಬಂದಿರುವ ಮೈಸೂರು ಹುಡುಗಿ ಶ್ರುತಿ ನಂದೀಶ್ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಈ ಹೊಸಬರ ಚಿತ್ರ ತೆರೆಗೆ ಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ