ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಹಾಗೂ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ಸುಲ್ತಾನ್ ಸಿನಿಮಾ ಸಟ್ಟೇರುವ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಕನ್ಫರ್ಮ್ ಆಗಿದೆ. ಇನ್ನು ಮೊನ್ನೆಯಷ್ಟೇ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಅಭಿನಯಿಸಲ್ಲ ಅನ್ನುವುದು ಕೂಡ ಖಚಿತವಾಗಿತ್ತು. ಆದ್ರೆ ಇದೀಗ ಸಿನಿಮಾದಲ್ಲಿ ಯಾರು ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಹೊಸ ಹೊಸ ಸುದ್ದಿಗಳು ಕೇಳಿ ಬರುತ್ತಿವೆ.
ಅಂದ್ಹಾಗೆ ಸಿನಿಮಾದ ನಿರ್ಮಾಪಕ ಆದಿತ್ಯ ಚೋಪ್ರಾ ಪರಿಣಿತಿ ಛೋಪ್ರಾರನ್ನು ಸಲ್ಲುಗೆ ನಾಯಕಿಗಾಗಿ ಮಾಡೋಕೆ ಪ್ಲಾನ್ ಮಾಡುತ್ತಿದ್ದಾರೆ. ಆದ್ರೆ ಸಲ್ಲುಮಿಯಾ ಮಾತ್ರ ತನ್ನ ಸಿನಿಮಾಕ್ಕೆ ಕೃತಿ ಸನೊನ್ ರನ್ನೇ ನಾಯಕಿ ಮಾಡಬೇಕು ಅಂತಿದ್ದಾರಂತೆ. ಕೃತಿ ಈಗಾಗಲೇ ಹೀರೋ ಪಂಥಿ ಸಿನಿಮಾದ ಮೂಲಕ ಬಾಲಿವುಡ್ ಅಂಗಳದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಇನ್ನು ಸಾಜೀದ್ ನಾಡಿಯವಾಲಾ ಕೂಡ ಕೃತಿ ಸನೂನೇ ಚಿತ್ರಕ್ಕೆ ಬೆಸ್ಟ್ ಅಂತಾ ಆಕೆಗೆ ವೋಟು ಮಾಡಿದ್ದಾರಂತೆ. ಸಲ್ಮಾನ್ ಖಾನ್ ಜೊತೆ ಕೃತಿ ನಟಿಸಿದ್ರೆ ಆಕೆ ಬೇಗನೇ ಬಾಲಿವುಡ್ ನಲ್ಲಿ ಹೆಸರು ಮಾಡಬಹುದು ಅನ್ನೋ ಲೆಕ್ಕಾಚಾರ ಸಾಜಿದ್ ಅವರದ್ದು. ಆದ್ರೆ ಇನ್ನು ಇಬ್ಬರಲ್ಲಿ ಯಾರು ಬೆಸ್ಟ್ ಅನ್ನೋದು ಫೈನಲ್ ಆಗಿಲ್ಲ.