ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಣ್ಣಾಥಾ ಚಿತ್ರದ ನಿರ್ದೇಶಕ ಶಿವ ಅವರು ತಮ್ಮ ತಂದೆ ಹೇಳಿದ ಮಾತನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.
ನಿರ್ದೇಶಕ ಶಿವ ಅವರ ತಂದೆ ಜಯಕುಮಾರ್ ಇತ್ತೀಚೆಗೆ ನಿಧನರಾದರು. ಈ ವಿಚಾರ ಅನೇಕರಿಗೆ ಆಘಾತವನ್ನುಂಟುಮಾಡಿದೆ. ತನ್ನ ತಂದೆಯನ್ನೇ ತನ್ನ ರೋಲ್ ಮಾಡೆಲ್ ಎಂದುಕೊಂಡಿದ್ದ ಶಿವ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಅಪ್ಪನನ್ನು ನೋಡಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಕಣ್ಣೀರು ಸುರಿಸಿದ್ದಾರೆ.