ಹುಚ್ಚ ವೆಂಕಟ್ ಶಾಸಕ ಮುನಿರತ್ನ ಅವರ ವಿರುದ್ಧ ಕಿಡಿಕಾರಲು ಕಾರಣವಾದರೂ ಏನು ?
ಗುರುವಾರ, 22 ಮಾರ್ಚ್ 2018 (06:40 IST)
ಬೆಂಗಳೂರು : ಇತ್ತಿಚೆಗೆ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಇದೀಗ ಶಾಸಕರೊಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಚ್ಚ ವೆಂಕಟ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಅವರು ಕ್ಷೇತ್ರದ ಮಹಿಳೆಯರಿಗೆ ಕುಕ್ಕರ್ ಹಂಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮತದಾರರ ಓಲೈಕೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕುಕ್ಕರ್ ನ ಮೇಲೆ ತಾಯಿ ರಾಜರಾಜೇಶ್ವರಿ ಆಶೀರ್ವಾದದಿಂದ ನಿಮ್ಮ ಮಗನಾಗಿ, ತಮ್ಮ, ಅಣ್ಣ, ಬಂಧುವಾಗಿ ಸೇವೆ ಮಾಡಲು ಭಾಗ್ಯ ದೊರೆತಿದೆ ಎಂದು ಬರೆದಿರುವುದರ ಕುರಿತು ಕಿಡಿಕಾರಿದ ಅವರು,’ಅಕ್ಕತಂಗಿ ಎನ್ನುವ ನೀವು ಇತ್ತೀಚೆಗೆ ಬಿಸಿಯೂಟ ಕಾರ್ಯಕರ್ತೆಯರು ಸತ್ಯಾಗ್ರಹ ಮಾಡಿದಾಗ ಏನು ಮಾಡಿದಿರಿ ? ಓಟು ಕೇಳುವಾಗ ಎಲ್ಲರೂ ನೆನಪಾಗುತ್ತಾರಾ? ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ