ಜಯಲಲಿತಾ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಕಮಲ್ ಹಾಸನ್ ಟ್ವೀಟರ್ ನಲ್ಲಿ ಏನು ಹೇಳಿದ್ದರು?

ಶುಕ್ರವಾರ, 9 ಡಿಸೆಂಬರ್ 2016 (14:21 IST)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನ ವಾರ್ತೆ ಕೇಳಿ ದೇಶಾದ್ಯಂತ ಗಣ್ಯರು ತಮ್ ಟ್ವಿಟರ್ ಪೇಜ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದರು. ಆದರೆ ತಮಿಳು ಸ್ಟಾರ್ ನಟ ಕಮಲ್ ಹಾಸನ್ ಮಾಡಿದ ಟ್ವೀಟ್ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಅಂತಹ ಟ್ವೀಟ್ ಏನು ಮಾಡಿದ್ದರು?

ಜಯಲಲಿತಾ ನಿಧನರಾದ ಬೆನ್ನಲ್ಲೇ ಕಮಲ್ ಹಾಸನ್ “ಅವರನ್ನು ಅವಲಂಬಿಸಿರುವವರಿಗೆ ನನ್ನ ಅನುಕಂಪವಿದೆ” ಎಂದು ಟ್ವೀಟ್ ಮಾಡಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿದೆ.  ಸತ್ತ ಮೇಲೂ ಧ್ವೇಷ ಸಾಧಿಸುವಂತಹ ಟ್ವೀಟ್ ಮಾಡಿದ ನಿಮಗೆ ನಾಚಿಕೆಯಾಗಬೇಕು ಎಂದು ಕೆಲವರು ಉತ್ತರಿಸಿದ್ದರೆ, ಇನ್ನು ಕೆಲವರು ಇಷ್ಟವಿಲ್ಲದಿದ್ದ ಮೇಲೆ ಟ್ವೀಟ್ ಮಾಡುವ ಗೋಜಿಗೆ ಹೋಗಿದ್ದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶ್ವರೂಪಂ ಬಿಡುಗಡೆಗೆ ಜಯಲಲಿತಾ ಸರ್ಕಾರ ಅಡ್ಡಿಪಡಿಸಿದಾಗ ಕಮಲ್ ಮತ್ತು ಜಯಲಲಿತಾ ಮಧ್ಯೆ ಸಂಬಂಧ ಹಳಸಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಮಲ್ ಜಯಲಲಿತಾ ತೀರಿಕೊಂಡ ಮೇಲೆ ಇಂತಹದ್ದೊಂದು ಟ್ವೀಟ್ ಮಾಡಿದ್ದಾರೆ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ