ಯಶ್ ಒಬ್ಬ ನೋಡಿದ್ರೆ ನನ್ನ ಸಿನಿಮಾಗೆ ಹಾಕಿದ ಹಣ ಬರಲ್ಲ: ಅಮ್ಮ ಪುಷ್ಪಾ ಹೇಳಿಕೆ

Krishnaveni K

ಬುಧವಾರ, 2 ಜುಲೈ 2025 (13:03 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಈಗ ಚೊಚ್ಚಲ ಸಿನಿಮಾ ನಿರ್ಮಾಣ ಮಾಡಿದ ಖುಷಿಯಲ್ಲಿದ್ದಾರೆ. ಅವರ ನಿರ್ಮಾಣದ ಕೊತ್ತಲವಾಡಿ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದ್ದು ನನ್ನ ಸಿನಿಮಾವನ್ನು ಯಶ್ ಒಬ್ಬ ನೋಡಿ ಬಿಟ್ಟರೆ ಹಣ ಬರಲ್ಲ ಎಂದು ನೇರ ಮಾತನಾಡಿದ್ದಾರೆ.

ಯಶ್ ತಾಯಿ ಪುಷ್ಪಾ ನೇರ ನುಡಿಯಿಂದಲೇ ಗುರುತಿಸಿಕೊಂಡವರು. ಈಗ ತಮ್ಮ ಚೊಚ್ಚಲ ನಿರ್ಮಾಣದ ಸಿನಿಮಾ ಬಿಡುಗಡೆ ಹಂತದಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗಲೂ ನೇರವಾಗಿಯೇ ಖಡಕ್ ಮಾತನಾಡಿ ಗಮನ ಸೆಳೆದಿದ್ದಾರೆ.

ಇಂದು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲು ಬಂದ ಪುಷ್ಪಾ ಬಳಿಕ ಮಾಧ್ಯಮಗಳ ಜೊತೆ ಸಿನಿಮಾ ಬಗ್ಗೆ ಮಾತನಾಡಿದರು. ಸಿನಿಮಾ ಬಗ್ಗೆ ಯಶ್ ಮಾತನಾಡುತ್ತಾರಾ, ಅವರು ಏನು ಹೇಳ್ತಾರೆ ಎಂದು ಮಾಧ್ಯಮಗಳು ಪ್ರಶ್ನಸಿದ್ದಕ್ಕೆ ಖಡಕ್ ಆಗಿ ಉತ್ತರಿಸಿದ ಯಶ್ ‘ಯಶ್ ಒಬ್ಬ ಮಾತನಾಡಿದರೆ ಸಿನಿಮಾಗೆ ನಾನು ಹಾಕಿದ ಹಣ ಬರುತ್ತಾ? ಅವನು ಒಬ್ಬ ಸಿನಿಮಾ ನೋಡಿದ್ರೆ ನನ್ನ ಸಿನಿಮಾ ಹಿಟ್ ಆಗಲ್ಲ. ಯಶ್ ಅವರ ಅಭಿಮಾನಿಗಳು, ಧ್ರುವ ಸರ್ಜಾ ಅಭಿಮಾನಿಗಳು ಹೀಗೆ ಎಲ್ಲರ ಅಭಿಮಾನಿಗಳೂ ಸಿನಿಮಾ ನೋಡಬೇಕು’  ಎಂದಿದ್ದಾರೆ.

ಯಶ್ ನಿಮ್ಮ ಬಳಿ ಏನೂ ಹೇಳಿಲ್ವಾ ಎಂದಿದ್ದಕ್ಕೆ ‘ಅವನು ನನ್ನ ಬಳಿ ಯಾಕೆ ಮಾತನಾಡುತ್ತಾನೆ? ಅವನ ಹೆಂಡ್ತಿ ಜೊತೆ ಮಾತನಾಡುತ್ತಾನೆ. ಅವನಿಗೆ ಮದುವೆ ಮಾಡಿರುವುದು ಯಾಕೆ? ಮದುವೆಯಾದ್ಮೇಲೆ ಹೆಂಡ್ತಿ ಜೊತೆ ಮಾತನಾಡಬೇಕು, ನೀನೂ ನಿನ್ನ ತಾಯಿಗಿಂತ ಗಂಡನ ಜೊತೆಗಲ್ವೇನಮ್ಮಾ ಮಾತನಾಡೋದು’ ಎಂದು ಪಕ್ಕದಲ್ಲಿದ್ದ ಪತ್ರಕರ್ತೆಯ ಕಾಲೆಳೆದರು.

ಇನ್ನು ನಾನು ಮಾತನಾಡೋ ಶೈಲಿಯೇ ಹೀಗೆ. ನೇರವಾಗಿ ಮಾತನಾಡಿ ಬಿಡುತ್ತೇನೆ. ಮಂಡ್ಯ, ಹಾಸನ ಶೈಲಿಯಲ್ಲಿ ಮಾತನಾಡುತ್ತೇನೆ. ಇಲ್ಲಿ ಜಾತಿ, ವಿವಾದ ಏನೂ ಇಲ್ಲ. ನನಗೆ ಅನಿಸಿದ್ದನ್ನು ಹೇಳಿಬಿಡುತ್ತೇನೆ ಅಷ್ಟೇ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ