ಬೆಂಗಳೂರು: ಕೆಜಿಎಫ್ ಎಂಬ ಹೆಸರು ಕನ್ನಡ ಚಿತ್ರರಂಗಕ್ಕೆ ಒಂದು ಕಳಶವಿದ್ದಂತೆ. ಕನ್ನಡ ಸಿನಿಮಾ ರಂಗವನ್ನು ಪ್ಯಾನ್ ಇಂಡಿಯಾ ಲೆವೆಲ್ ಗೆ ಕೊಂಡೊಯ್ದ ಈ ಸಿನಿಮಾದ ಮೂರನೇ ಭಾಗದ ಬಗ್ಗೆ ಈಗ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಕೆಜಿಎಫ್ 1,2 ಬಾಕ್ಸ್ ಆಫೀಸ್ ನಲ್ಲಿ ಹಣ ಕೊಳ್ಳೆ ಹೊಡೆದಿತ್ತು. ಜೊತೆಗೆ ಪ್ರಶಾಂತ್ ನೀಲ್, ಯಶ್ ನ್ಯಾಷನಲ್ ಸ್ಟಾರ್ ಗಳಾದರು. ಕೆಜಿಎಫ್ 3 ಕೂಡಾ ಬರಲಿದೆ ಎಂದು ಪ್ರಶಾಂತ್ ನೀಲ್ ಈಗಾಗಲೇ ಹೇಳಿದ್ದರು.
ಇದೀಗ ಕೆಜಿಎಫ್ 3 ಸಿನಿಮಾ ಬಗ್ಗೆ ಅಪ್ ಡೇಟ್ ಒಂದು ಸಿಕ್ಕಿದೆ. ಸದ್ಯದಲ್ಲೇ ಕೆಜಿಎಫ್ 3 ಸಿನಿಮಾ ಘೋಷಣೆಯಾಗಲಿದೆ. ವಿಶೇಷವೆಂದರೆ ಮೂರನೇ ಭಾಗದಲ್ಲಿ ತಮಿಳಿನ ಸೂಪರ್ ಸ್ಟಾರ್ ಅಜಿತ್ ಕುಮಾರ್ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಸುದ್ದಿಯಾಗುತ್ತಿದೆ.
2027 ಕ್ಕೆ ಕೆಜಿಎಫ್ 3 ಸೆಟ್ಟೇರಲಿದೆ. ಸದ್ಯಕ್ಕೆ ಯಶ್, ಪ್ರಶಾಂತ್ ನೀಲ್ ಇಬ್ಬರೂ ತಮ್ಮದೇ ಆದ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲವೂ ಮುಗಿದ ಬಳಿಕ ಈ ಜೋಡಿ ಕೆಜಿಎಫ್ 3 ಸಿನಿಮಾ ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ.