ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಚಾರ್ಜ್ ಶೀಟ್ ನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲೂ ಪವಿತ್ರಾ ಗೌಡ ಎ1 ಆರೋಪಿಯಾಗಿಯೇ ಮುಂದುವರಿದಿದ್ದಾರೆ. ಇದಕ್ಕೆ ಕಾರಣವೇನು ಎಂಬುದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ದಾಖಲಾದಾಗ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರು. ಆದರೆ ಬಳಿಕ ವಿಚಾರಣೆ ನಡೆದಂತೆ ದರ್ಶನ್ ಪಾತ್ರ ದೊಡ್ಡದಿದೆ ಎಂಬ ಕಾರಣಕ್ಕೆ ಅವರನ್ನೇ ಎ1 ಆರೋಪಿಯಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.
ಆದರೆ ಚಾರ್ಜ್ ಶೀಟ್ ನಲ್ಲಿ ಎ1 ಆಗಿಯೇ ಪವಿತ್ರಾ ಗೌಡ ಮುಂದುವರಿದಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಕೊಲೆಗೆ ಮುಖ್ಯ ಕಾರಣ ಪವಿತ್ರಾ ಗೌಡ. ಪಟ್ಟಣಗೆರೆ ಶೆಡ್ ನಲ್ಲಿ ಪವಿತ್ರಾ ಗೌಡ ಇರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ರೇಣುಕಾಸ್ವಾಮಿಗೆ ಪವಿತ್ರಾ ಹೊಡೆದಿರುವುದೂ ನಿಜವೆಂದು ಸಾಬೀತಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆತನನ್ನು ಸಾಯಿಸಿ ಎಂದು ಪವಿತ್ರಾ ಕೋಪದಿಂದ ಹೇಳಿಕೆ ನೀಡಿರುವುದು ಅವರೇ ಎ1 ಆರೋಪಿಯಾಗಿ ಮುಂದುವರಿಯುವುದಕ್ಕೆ ಪ್ರಮುಖ ಕಾರಣವಾಗಿದೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಐದು ಫೋಟೋಗಳು ಲಭ್ಯವಾಗಿದ್ದು ಇದೆಲ್ಲವೂ ಪವಿತ್ರಾಗೆ ಮುಳುವಾಗಿದೆ.