ಇತರರ ಪತಿ-ಪತ್ನಿ ನಮಗ್ಯಾಕೆ: ವಿದ್ಯಾಬಾಲನ್

ಸೋಮವಾರ, 25 ಮೇ 2015 (10:34 IST)
ವೈವಾಹಿಕ ಬದುಕು ಎನ್ನುವುದು ನಂಬಿಕೆಯ ಅಡಿಯ ಮೇಲೆ ನಿಂತಿರುತ್ತದೆ. ಪತಿ-ಪತ್ನಿಯರ ನಡುವೆ ನಂಬಿಕೆ ಇದ್ದಲ್ಲಿ ಆ ಬಂಧ ತುಂಬಾ ಸುಂದರವಾಗಿ ಮುನ್ನಡೆಯುತ್ತದೆ. ಆ ಸಂಗತಿಯ ಬಗ್ಗೆ ಹೇಳುವುದಾದರೆ ಬಾಳಸಂಗಾತಿಗೆ ಮೋಸ ಮಾಡುತ್ತಾ ಕೆಲವರು ಬದುಕನ್ನು ನಡೆಸುತ್ತಾರೆ. 
ಅಷ್ಟೇ ಅಲ್ಲದೆ ಹೆಂಡತಿಯನ್ನು ಮನೆಗೆ ಮಿತಿಗೊಳಿಸಿ ಹೊರಗೆ ಮತ್ತೊಬ್ಬ ಹೆಣ್ಣಿನ ಜೊತೆ ಓಡಾಡುತ್ತಾರೆ. ಯಾವ ಕಾರಣಕ್ಕಾಗಿ ಹೀಗೆ? ಪತ್ನಿಗೆ ವಿಚ್ಛೇದನ ನೀಡಿ ಆರಾಮವಾಗಿ ಆ ಹುಡುಗಿ ಜೊತೆ ಮದುವೆ ಆಗ ಬಹುದಲ್ಲವೇ?ಅದೇರೀತಿ ಗಂಡನಿಗೆ ಮೋಸ ಮಾಡುವಂತಹ ಹೆಂಡತಿಯರೂ ಇಲ್ಲದಿಲ್ಲ. 
 
ಆದರೆ ಸಮಾಜಕ್ಕೆ ಹೆದರಿ ಕಳ್ಳತನದಿಂದ ಅಂತಹ ವ್ಯವಹಾರಗಳನ್ನು ನಡೆಸುತ್ತಾರೆ. ನನಗೆ ಅಂತಹ ಆರಾಮ ಸಂಬಧಗಳ ಬಗ್ಗೆ ಸಿನಿಮಾ ನಿರ್ಮಿಸುವ ಆಶಯ ಉಂಟಾಗಿದೆ. ಪ್ರೀತಿಸುವುದು ತಪ್ಪಲ್ಲ ಆದರೆ ಮದುವೆ ಆದ ಬಳಿಕ ಬಾಲ ಸಂಗಾತಿಯನ್ನು ಪ್ರೀತಿಸಬೇಕು. ಒಂದು ವೇಳೆ ಮದುವೆ ಆಗದೆ ಹೋದರು ಸಹಿತ ಬೇರೆಯವರ ಪತಿಯೊಂದಿಗೆ ಪ್ರೀತಿಯ ಕಥೆ ಆರಂಭ ಮಾಡಬಾರದು. ಬೇರೆಯವರ ಪತಿ ಪತ್ನಿ ನಮಗ್ಯಾಕೆ ಬೇಕು ? ಅದೂ ಸಹಿತ ತಪ್ಪೇ ಅಲ್ಲವೇ ಎಂದು ಬಾಲಿವುಡ್ ಊಲಾಲಾ ಸುಂದರಿ ವಿದ್ಯಾಬಾಲನ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ