ಜೈಲಿನಲ್ಲಿ ದರ್ಶನ್ ನಡತೆ ಅವರ ಬಿಡುಗಡೆಗೆ ಕಂಟಕವಾಗುತ್ತಾ

Krishnaveni K

ಶುಕ್ರವಾರ, 13 ಸೆಪ್ಟಂಬರ್ 2024 (09:01 IST)
Photo Credit: Instagram
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಇನ್ನೇನು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಆದರೆ ಜೈಲಿನಲ್ಲಿ ಅವರ ವರ್ತನೆ ಈಗ ಅವರಿಗೇ ಮುಳುವಾಗಲಿದೆಯಾ ಎಂಬ ಅನುಮಾನ ಶುರುವಾಗಿದೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜೂನ್ 11 ರಂದು ಬಂಧಿತರಾಗಿದ್ದ ದರ್ಶನ್ ಬಳಿಕ ಎರಡು ವಾರ ಪೊಲೀಸ್ ಕಸ್ಟಡಿ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎರಡು ತಿಂಗಳು ನ್ಯಾಯಾಂಗ ಬಂಧನ ಅನುಭವಿಸಿದ್ದರು. ಆದರೆ ಈ ವೇಳೆ ಅವರು ಜೈಲಿನ ರೌಡಿಶೀಟರ್ ಗಳ ಕೃಪೆಯಿಂದ ರಾಜಾತಿಥ್ಯ ಪಡೆದುಕೊಂಡು ರೆಸಾರ್ಟ್ ನಲ್ಲಿದ್ದಂತೆ ಕಾಲ ಕಳೆದಿದ್ದರು.

ಈ ಫೋಟೋಗಳು ವೈರಲ್ ಆಗುತ್ತಿದ್ದಂತೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಇದೀಗ ಬಳ್ಳಾರಿ ಜೈಲಿನಲ್ಲಿ ನಿನ್ನೆ ತಮ್ಮ ಕಡೆಗೆ ಫೋಕಸ್ ಮಾಡಿದ್ದ ಮಾಧ್ಯಮಗಳ ಕ್ಯಾಮರಾದತ್ತ ಮಧ್ಯ ಬೆರಳು ತೋರಿ ಅಸಭ್ಯ ವರ್ತನೆ ತೋರುವ ಮೂಲಕ ಇಂಥಾ ಪ್ರಕರಣದಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿದರೂ ತಮ್ಮ ದುರಹಂಕಾರ ಕಡಿಮೆಯಾಗಲಿಲ್ಲ ಎಂದು ತೋರಿಸಿದ್ದಾರೆ.

ಅವರ ಈ ವರ್ತನೆಗಳು ಸಹಜವಾಗಿಯೇ ಜಾಮೀನು ಅರ್ಜಿ ವಿಚಾರಣೆ ವೇಳೆ ಉಲ್ಲೇಖವಾಗಲಿದೆ. ಇಂತಹ ವ್ಯಕ್ತಿಯನ್ನು ಹೊರಗೆ ಬಿಟ್ಟರೆ ಕೇಸ್ ನ ಮೇಲೆ ಯಾವ ರೀತಿಯ ಪರಿಣಾಮವಾಗಬಹುದು ಎಂದು ಎಸ್ ಪಿಪಿ ಖಂಡಿತವಾಗಿಯೂ ವಾದ ಮಂಡಿಸಲಿದ್ದಾರೆ. ಒಬ್ಬ ವ್ಯಕ್ತಿ ಒಮ್ಮೆ ಎಡವಿದರೆ ಬುದ್ಧಿ ಕಲಿಯುತ್ತಾನೆ. ಆದರೆ ದರ್ಶನ್ ದುರಹಂಕಾರ ಯಾವ ಮಟ್ಟಿಗಿದೆ ಎನ್ನುವುದು ನಿನ್ನೆಯ ಅವರ ವರ್ತನೆಯಿಂದಲೇ ಮತ್ತೊಮ್ಮೆ ಸಾಬೀತಾಗಿದೆ. ಇಂತಹ ವರ್ತನೆಗಳು ತಮ್ಮ ಕೇಸ್ ನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕ್ಯಾರೇ ಇಲ್ಲದೇ ವರ್ತನೆ ತೋರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ