ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸೀಸನ್ 1 ನ ವಿನ್ನರ್ ಆರವ್ ನಫೀಸ್
ಸೋಮವಾರ, 7 ಸೆಪ್ಟಂಬರ್ 2020 (12:24 IST)
ಚೆನ್ನೈ : ಬಿಗ್ ಬಾಸ್ ಸೀಸನ್ 1 ನ ವಿನ್ನರ್ ಆರವ್ ನಫೀಸ್ ತಮಿಳು ನಟಿ ರಾಹಿಯೊಂದಿಗೆ ಭಾನುವಾರ(ಸೆಪ್ಟಂಬರ್ 6)ದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆರವ್ ಮತ್ತು ರಾಹಿ 1 ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಇಬ್ಬರು ಸತಿಪತಿಗಳಾಗಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಇವರ ವಿವಾಹವು ಹೋಟೆಲ್ ವೊಂದರಲ್ಲಿ ಸರಳವಾಗಿ ನಡೆದಿದೆ.
ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು, ಕುಟುಂಬದ ಸದಸ್ಯರು, ಹಾಗೂ ಬಿಗ್ ಬಾಸ್ ಸಹ ಸ್ಪರ್ಧಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.