ಆಪ್ತಸಹಾಯಕನ ಮಗುವಿಗೆ ಚಿನ್ನದ ಉಡುಗೊರೆ ನೀಡಿದ ಯಶ್ ದಂಪತಿ

Krishnaveni K

ಮಂಗಳವಾರ, 13 ಫೆಬ್ರವರಿ 2024 (10:00 IST)
Photo Courtesy: facebook
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಆಪ್ತ ಸಹಾಯಕನ ಮಗನಿಗೆ ಚಿನ್ನದ ಸರ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಯಶ್ ಮತ್ತು ರಾಧಿಕಾ ದಂಪತಿಯ ಆಪ್ತ ಸಹಾಯಕನಾಗಿ ಕೆಲಸ ಮಾಡುವ ಚೇತನ್ ಎಂಬವರಿಗೆ ಇತ್ತೀಚೆಗೆ ಮಗುವಾಗಿದೆ. ಮಗುವನ್ನು ನೋಡಲು ಸಹಾಯಕನ ಮನೆಗೇ ಭೇಟಿ ಕೊಟ್ಟ ಯಶ್ ದಂಪತಿ ಮಗುವನ್ನು ಎತ್ತಿ ಮುದ್ದಾಡಿಲ್ಲದೆ ತಮ್ಮ ಕೈಯಾರೆ ಚಿನ್ನದ ಸರವನ್ನು ಹಾಕಿ ಆಶೀರ್ವಾದ ಮಾಡಿದ್ದಾರೆ.

ಯಶ್ ದಂಪತಿ ಎಷ್ಟೇ ಖ್ಯಾತಿ ಪಡೆದಿದ್ದರೂ ತಮ್ಮ ಆಪ್ತರನ್ನು, ಜೊತೆಗಿರುವವರನ್ನು ಎಂದಿಗೂ ಮರೆಯಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಚೇತನ್ ಮಗುವಿನ ಜೊತೆಗಿರುವ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಕ್ಸಿಕ್ ಕೆಲಸದಲ್ಲಿ ಬ್ಯುಸಿಯಾಗಿರುವ ಯಶ್
ಇತ್ತೀಚೆಗಷ್ಟೇ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಘೋಷಣೆಯಾಗಿತ್ತು. ಕಳೆದ ಕೆಲವು ಸಮಯದಿಂದ ಯಶ್ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳ ಅಂತ್ಯಕ್ಕೆ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಈ ಬ್ಯುಸಿಯ ನಡುವೆಯೂ ತಮ್ಮ ಆಪ್ತನ ಮಗುವನ್ನು ನೋಡಲು ಖುದ್ದಾಗಿ ಬಂದ ಯಶ್ ದಂಪತಿಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಟಾಕ್ಸಿಕ್ ಜೊತೆಗೆ ಬಾಲಿವುಡ್ ನಿಂದಲೂ ಯಶ್ ಗೆ ಆಫರ್ ಬರುತ್ತಿದೆ. ಹಿಂದಿಯ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜೊತೆಗೆ ಶಾರುಖ್ ಖಾನ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದು ಯಾವುದನ್ನೂ ಯಶ್ ಅಧಿಕೃತಗೊಳಿಸಿಲ್ಲ. ಬಹುಶಃ ಟಾಕ್ಸಿಕ್ ಮುಗಿದ ಬಳಿಕ ಅವರು ಮುಂದಿನ ಸಿನಿಮಾ ಬಗ್ಗೆ ಘೋಷಣೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ