ನಿರ್ಮಾಪಕ ದಿಲ್ ರಾಜು ಬರ್ತ್ ಡೇ ಪಾರ್ಟಿಯಲ್ಲಿ ತೆಲುಗು ನಟರೊಂದಿಗೆ ಭಾಗಿಯಾದ ಯಶ್

ಶುಕ್ರವಾರ, 18 ಡಿಸೆಂಬರ್ 2020 (09:37 IST)
ಹೈದರಾಬಾದ್: ಖ್ಯಾತ ನಿರ್ಮಾಪಕ ದಿಲ್ ರಾಜು 50 ನೇ ಹುಟ್ಟುಹಬ್ಬವನ್ನು ಅದ್ಧೂರಿ ಪಾರ್ಟಿ ಮೂಲಕ ಆಚರಿಸಿಕೊಂಡಿದ್ದಾರೆ. ಅವರ ಅದ್ಧೂರಿ ಬರ್ತ್ ಡೇ ಪಾರ್ಟಿಯಲ್ಲಿ ತೆಲುಗಿನ ಖ್ಯಾತ ನಟ-ನಟಿಯರೊಂದಿಗೆ ರಾಕಿಂಗ್ ಸ್ಟಾರ್ ಯಶ್ ಕೂಡಾ ಭಾಗಿಯಾಗಿದ್ದಾರೆ.


ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದ ದಿಲ್ ರಾಜು ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಸ್ವತಃ ಅವರ ಪುತ್ರಿ ಆಶಿತಾ ರೆಡ್ಡಿ ಆಯೋಜಿಸಿದ್ದಾರೆ. ಈ ಅದ್ಧೂರಿ ಪಾರ್ಟಿಯಲ್ಲಿ ಪ್ರಭಾಸ್, ರಾಮಚರಣ್ ತೇಜ್ ಜತೆಗೆ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಕೂಡಾ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ