ಪವನ್ ಒಡೆಯರ್ ಮಾಡಿದ ಬಾಸ್ ಟ್ವೀಟ್: ಯಶ್-ದರ್ಶನ್ ಅಭಿಮಾನಿಗಳ ನಡುವೆ ಕಿತ್ತಾಟ

ಬುಧವಾರ, 27 ಮೇ 2020 (09:23 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ಮತ್ತೆ ಸ್ಯಾಂಡಲ್ ವುಡ್ ಬಾಸ್ ಯಾರು ಎನ್ನುವ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆದಿದೆ.


ಇದಕ್ಕೆ ಕಾರಣವಾಗಿದ್ದು ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವೀಟ್ ಒಂದರಲ್ಲಿ ಯಶ್ ರನ್ನು ಬಾಸ್ ಎಂದು ಕರೆದಿದ್ದು. ಈ ಟ್ವೀಟ್ ಗೆ ಯಶ್ ಮತ್ತು ದರ್ಶನ್ ಅಭಿಮಾನಿಗಳು ನಮ್ಮ ಅಣ್ಣನೇ ಬಾಸ್ ಎಂದು ಕಿತ್ತಾಡಿಕೊಂಡಿದ್ದಾರೆ.

ಅಲ್ಲದೆ, ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ನೆಚ್ಚಿನ ಸ್ಟಾರ್ ಬಾಸ್ ಎನ್ನುವ ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಿ ಟ್ರೆಂಡ್ ಮಾಡಿದ್ದಾರೆ. ಹಿಂದೆಯೂ ಇವರಿಬ್ಬರ ಅಭಿಮಾನಿಗಳು ಒಮ್ಮೆ ಇದೇ ವಿಚಾರಕ್ಕೆ ಕಿತ್ತಾಡಿಕೊಂಡಿದ್ದರು. ಆದರೆ ಈ ಇಬ್ಬರೂ ಸ್ಟಾರ್ ನಟರು ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಆದರೆ ಇವರ ಹೆಸರಿನಲ್ಲಿ ಅಭಿಮಾನಿಗಳು ಕಿತ್ತಾಡಿಕೊಳ್ಳುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ