ಸಾಮಾಜಿಕ ಜಾಲತಾಣಗಳಲ್ಲಿ ಯಶ್​ ಅಭಿಮಾನಿಗಳಿಂದ ಉಪೇಂದ್ರ ಅಭಿಮಾನಿಗೆ ಕಿರುಕುಳ

ಗುರುವಾರ, 18 ಅಕ್ಟೋಬರ್ 2018 (06:31 IST)
ಬೆಂಗಳೂರು : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿತ್ತಾಟಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಇದೀಗ ಮತ್ತೆ ನಟ ಯಶ್ ಹಾಗೂ ಉಪೇಂದ್ರ ಅಭಿಮಾನಿಗಳು ಕಿತ್ತಾಡಿಕೊಂಡಿದ್ದಾರೆ.


ಹೌದು. ಉಪೇಂದ್ರ ಅಭಿಮಾನಿ ಗೋಕುಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ಯಶ್​ ಅಭಿಮಾನಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೋಕುಲ್ ಎಂಬುವವರು ಯಶ್ ಅಭಿಮಾನಿಗಳು ಅವಹೇಳನಕಾರಿ ಪೋಸ್ಟ್ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಅವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


'ಟ್ರೋಲ್ ಅಧಿಪತಿ' ಹಾಗೂ 'Who Trolls yash' ಎಂಬ ಫೇಸ್​​ಬುಕ್​​​ ಪೇಜ್​​ನಲ್ಲಿ ನನ್ನ ಪೋಟೋ ಬಳಸಿ, ನನ್ನ ಬಗ್ಗೆ ಕೆಟ್ಟದ್ದಾಗಿ ಪೋಸ್ಟ್​ ಮಾಡಿದ್ದಾರೆ ಎಂದು ದೂರಿನಲ್ಲಿ ಗೋಕಲ್​ ಆರೋಪಿಸಿದ್ದಾನೆ. ಈ ಕುರಿತು ತನಿಖೆ ಮುಂದುವರೆದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ