ಅಪರಾಧಿಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿರುವ ಯಶ್

ಮಂಗಳವಾರ, 27 ಜನವರಿ 2015 (11:18 IST)
ಕನ್ನಡ ಚಿತ್ರರಂಗದ ಯಶಸ್ವಿ ನಟ ಯಶ್ ರಾಕಿಂಗ್  ಆಕ್ಟರ್ ಯಶ್ ಈಗ ಕರ್ನಾಟಕ ರಾಜ್ಯವನ್ನು ಅಪರಾಧಿ ಮುಕ್ತ ರಾಜ್ಯವನ್ನಾಗಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಂದರೆ ಈಗ ಅವರು  ಸಿಟಿ ಕ್ರೈಮ್ ಬ್ರಾಂಚ್ನ  ಜಾಹೀರಾತಿನಲ್ಲಿ ಕಾಣಿಸಿಸಿಕೊಂಡು ಆ ಡಿಪಾರ್ಟ್ ಮೆಂಟ್ ನ ರಾಯಬಾರಿ ಆಗಿದ್ದಾರೆ. ಇವರು ಜಾಹೀರಾತಿನ ಮೂಲಕ ಯುವ ಜನತೆಗೆ ಅಪರಾಧದ ಕ್ರಿಯೆಗಳಲ್ಲಿ ತೊಡಗಬೇಡಿ ಎಂದು ಬುದ್ಧಿ ಹೇಳಲಿದ್ದಾರೆ. ಯಶ್ ಗೂ ಮುನ್ನ ಈ ರೀತಿ ಸಿಸಿಬಿಯ ರಾಯಬಾರಿಗಳಾಗಿ ಕಿಚ್ಚ ಸುದೀಪ್, ಕ್ರೀಡಾಪಟು ರಾಹುಲ್ ದ್ರಾವಿಡ್, ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆ ಆಯ್ಕೆ ಆಗಿದ್ದರು. 
ಅಪರಾಧ ಮುಕ್ತ ರಾಜ್ಯ ಎನ್ನುವ ಪೋಸ್ಟರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಸಂಗತಿಯನ್ನು ಜಂಟಿ ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಇದರ ನಡುವೆ ಯಶ್ ಹಾಗೂ ರಾಧಿಕ ಪಂಡಿತ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರವೂ ಈಗ ಯುಎಸ್ ದೇಶದ ಮಿಲ್ಪಿಟಾಸ್ ಮತ್ತು ಸಿಎ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿವೆ.ಈ ಮೂಲಕ ಅನಿವಾಸಿ ಭಾರತೀಯರನ್ನು ಆಕರ್ಷಿಸುತ್ತಿದ್ದರೆ ಯಶ್. ಒಟ್ಟಾರೆ ಈಗ ಯಶ್ ಯಶಸ್ವಿ ಕಾಲ. 
 

ವೆಬ್ದುನಿಯಾವನ್ನು ಓದಿ